ನವದೆಹಲಿ: ಆತಿಥೇಯ ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಿಂದ ಭಾರತದ ವೇಗದ ಬೌಲರ್ ಮೊಹಮ್ಮದ್ ಶಮಿ ಹೊರಗುಳಿದಿದ್ದಾರೆ. ಕೈ ಗಾಯದಿಂದ ಬಳಲುತ್ತಿದ್ದು ಇದರ ಪರಿಣಾಮವಾಗಿ, ಅವರು ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾದೊಂದಿಗೆ ಕಾಣಿಸಿಕೊರ್ಳಳುವುದಿಲ್ಲ ಎನ್ನಲಾಗಿದೆ. ಟಿ 20 ವಿಶ್ವಕಪ್ ನಂತರ, ಶಮಿ ವಿರಾಮದ ನಂತರ ಅಭ್ಯಾಸ ಮಾಡುತ್ತಿದ್ದರು ಮತ್ತು ಆಗ ಅವರು ಗಾಯಗೊಂಡರು ಎನ್ನಲಾಗಿದೆ.
“ಕೈ ಗಾಯದಿಂದಾಗಿ ಭಾರತದ ವೇಗಿ ಮೊಹಮ್ಮದ್ ಶಮಿ ಅವರನ್ನು ಮುಂಬರುವ ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಿಂದ ಹೊರಗಿಡಲಾಗಿದೆ ಎಂದು ವರದಿಯಾಗಿದೆ, ಶಮಿ ಟೆಸ್ಟ್ಗೂ ಅನುಮಾನಾಸ್ಪದವಾಗಿದ್ದಾರೆ” ಎಂದು ಖಾಸಗಿ ಮಾಧ್ಯಮವವೊಂದು ವರದಿ ಮಾಡಿದೆ. “ಮೊಹಮ್ಮದ್ ಶಮಿ ಅವರ ಬದಲಿ ಆಟಗಾರನಾಗಿ ಉಮ್ರಾನ್ ಮಲಿಕ್ ಅವರನ್ನು ಹೆಸರಿಸಲಾಗಿದೆ.
ಬಾಂಗ್ಲಾದೇಶ ಏಕದಿನ ಪಂದ್ಯಕ್ಕೆ ಭಾರತ ತಂಡ ಇಂತಿದೆ: ರೋಹಿತ್ ಶರ್ಮಾ (ನಾ), ಕೆಎಲ್ ರಾಹುಲ್ (ಉನಾ), ಶಿಖರ್ ಧವನ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಶ್ರೇಯಸ್ ಅಯ್ಯರ್, ರಾಹುಲ್ ತ್ರಿಪಾಠಿ, ರಿಷಭ್ ಪಂತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಶಹಬಾಜ್ ಅಹ್ಮದ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಮೊಹಮ್ಮದ್. ಮೊಹಮ್ಮದ್, ಶಮಿ. ಸಿರಾಜ್, ದೀಪಕ್ ಚಹರ್, ಕುಲದೀಪ್ ಸೇನ್.
ಬಾಂಗ್ಲಾದೇಶ ಟೆಸ್ಟ್ ಗೆ ಭಾರತ ತಂಡ ಇಂತಿದೆ: ರೋಹಿತ್ ಶರ್ಮಾ (ನಾ), ಕೆಎಲ್ ರಾಹುಲ್ (ಉನಾ), ಶುಭ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ಕೆ.ಎಸ್.ಭರತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಶಾರ್ದೂಲ್ ಠಾಕೂರ್.