ದಾವಣಗೆರೆ : ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ.ರೇಣುಕಾಚಾರ್ಯ ಆಪ್ತ ಸಹಾಯಕನ ಮೇಲೆ ದುಷ್ಕರ್ಮಿಗಳು ತಡರಾತ್ರಿ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ನಡೆದಿದೆ.
ಹೊನ್ನಾಳಿಯಲ್ಲಿ ನಿನ್ನೆ ರಾತ್ರಿ ಶಾಸಕ ರೇಣುಕಾಚಾರ್ಯ ಆಪ್ತ ಪ್ರಜ್ವಲ್ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಸದ್ಯ ಪ್ರಜ್ವಲ್ ನನ್ನು ಹೊನ್ನಾಳಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೆ ಭೇಟಿ ನೀಡಿ ಶಾಸಕ ರೇಣುಕಾಚಾರ್ಯ ಪ್ರಜ್ವಲ್ ಆರೋಗ್ಯ ವಿಚಾರಿಸಿದ್ದಾರೆ.
ಈ ವೇಳೆ ಪ್ರಜ್ವಲ್ ಮೇಲೆ ಹಲ್ಲೆ ಮಾಡಿರುವ ದುಷ್ಕರ್ಮಿಗಳನ್ನು ಬಂಧಿಸುವಂತೆ ಹೊನ್ನಾಳಿ ಪೊಲೀಸರಿಗೆ ಶಾಸಕ ರೇಣುಕಾಚಾರ್ಯ ಸೂಚನೆ ನೀಡಿದ್ದಾರೆ.