ಕೆಎನ್ಎನ್ಡಿಜಿಟಲ್ ಡೆಸ್ಕ್ : ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ನಲ್ಲಿ ಶನಿವಾರ ಬೃಹತ್ ವಿದ್ಯುತ್ ಯೋಜನೆಯ ಸ್ಥಳದಲ್ಲಿ ಭಾರಿ ಭೂಕುಸಿತ ಸಂಭವಿಸಿದೆ. ಈ ಘಟನೆಯಲ್ಲಿ ಜೆಸಿಬಿ ಚಾಲಕ ಮೃತಪಟ್ಟಿದ್ದು, ಹಲವರು ಅವಶೇಷಗಳಡಿ ಸಿಲುಕಿದ್ದಾರೆ. ಸಿಕ್ಕಿಬಿದ್ದ ಚಾಲಕನ ರಕ್ಷಣೆಗೆ ತಂಡ ಧಾವಿಸಿದ್ದು, ಈ ವೇಳೆ ಹೊಸ ಭೂಕುಸಿತ ಸಂಭವಿಸಿದೆ. ಇದು ಆ ಜನರನ್ನೂ ಬಲೆಗೆ ಕೆಡವಿದೆ. ಇನ್ನು ಇವ್ರ ರಕ್ಷಣೆಗಾಗಿಯೂ ಕಾರ್ಯಾಚರಣೆ ನಡೆಯುತ್ತಿದ್ದು, ಪೊಲೀಸ್ ತಂಡಗಳು ಸ್ಥಳಕ್ಕೆ ಧಾವಿಸಿವೆ.
ಇನ್ನು ಈ ಕುರಿತು ಮಾಹಿತಿ ನೀಡಿದ ಕೇಂದ್ರ ಸಚಿವ ಜಿತೇಂದ್ರ ಸಿಂಗ್, “ಸುಮಾರು ಆರು ಜನರ ರಕ್ಷಣಾ ತಂಡವು ಅವಶೇಷಗಳ ಅಡಿಯಲ್ಲಿ ಸಿಲುಕಿದೆ” ಎಂದು ಹೇಳಿದರು. “ನಿರ್ಮಾಣ ಹಂತದಲ್ಲಿರುವ ರಾಟ್ಲೆ ವಿದ್ಯುತ್ ಯೋಜನೆಯ ಸ್ಥಳದಲ್ಲಿ ಸಂಭವಿಸಿದ ಭೀಕರ ಭೂಕುಸಿತದ ವರದಿಯನ್ನು ಸ್ವೀಕರಿಸಿದ ನಂತರ ಜಮ್ಮು ಮತ್ತು ಕಾಶ್ಮೀರದ ಡಿಸಿ ಕಿಶ್ತ್ವಾರ್ ಅವರೊಂದಿಗೆ ಮಾತನಾಡಿದ್ದೇನೆ. ದುರದೃಷ್ಟವಶಾತ್ ಜೆಸಿಬಿ ಚಾಲಕ ಮೃತಪಟ್ಟಿದ್ದಾನೆ. ಘಟನೆಯ ನಂತರ ಸ್ಥಳಕ್ಕೆ ನಿಯೋಜಿಸಲಾದ ಸುಮಾರು ಆರು ಜನರ ರಕ್ಷಣಾ ತಂಡವು ಸಹ ಅವಶೇಷಗಳ ಅಡಿಯಲ್ಲಿ ಸಿಲುಕಿದೆ” ಎಂದು ಅವರು ಸುದ್ದಿ ಸಂಸ್ಥೆ ಎಎನ್ಐಗೆ ತಿಳಿಸಿದರು.
BREAKING NEWS : ಅರ್ಹ ಹಿರಿಯ ಸಾಹಿತಿ, ಕಲಾವಿದರಿಗೆ ‘ಮಾಸಾಶನ’ ಮಂಜೂರು ಮಾಡಿ ರಾಜ್ಯ ಸರ್ಕಾರ ಆದೇಶ
Karnataka Rain: ರಾಜ್ಯದಲ್ಲಿ ಮತ್ತೆ ನ.2ರಿಂದ ಮಳೆ ಆರಂಭ: ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ