ಬೆಂಗಳೂರು : ಚೀನಾ ಸೇರಿ ಇತರೆ ದೇಶಗಳಲ್ಲಿ ಕೊರೊನಾ ಉಲ್ಭಣವಾಗುತ್ತಿದ್ದಂತೆ ಹೆಚ್ಚುತ್ತುಕೊಂಡಿರುವ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಅದ್ರಂತೆ, ಸಧ್ಯ ಶಾಲಾ-ಕಾಲೇಜು, ಥಿಯೇಟರ್ ಸೇರಿ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಮಾಸ್ಕ್ ಕಡ್ಡಾಯ ಮಾಡಿದೆ.
ಕೋವಿಡ್ ಪರಿಶೀಲನಾ ಸಭೆಯ ನಂತ್ರ ಮಾಧ್ಯಮಳೊಂದಿಗೆ ಮಾತನಾಡಿದ ಸಚಿವ ಆರ್. ಅಶೋಕ್, ಬೆಂಗಳುರಿಗೆ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು ಎಂದರು. ಇನ್ನು ಕೊರೊನಾ ಸೋಂಕಿಗೆ ಆರಂಭದಲ್ಲೇ ಕಡಿವಾಣ ಹಾಕಲು ಸರ್ಕಾರ ಮುಂದಾಗಿದ್ದು, ಮಾಸ್ಕ್ ಕಡ್ಡಾಯಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇನ್ನು ನಿಯಮ ಉಲ್ಲಂಘಿಸಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತೆ. ಹೀಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್ ನಿಯಮ ಪಾಲನೆ ಮಾಡಬೇಕು. ಕೊರೊನಾ ನಿಯಂತ್ರಣಕ್ಕೆ ಬಿಗಿ ಕ್ರಮ ಕೈಗೊಳ್ಳಲಾಗಿದೆ ಎಂದರು.
ನಂತ್ರ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ ಸುಧಾಕರ್, “ಚಲನಚಿತ್ರ ಮಂದಿರಗಳು, ಶಾಲೆಗಳು ಮತ್ತು ಕಾಲೇಜುಗಳಲ್ಲಿ ಮಾಸ್ಕ್ಗಳನ್ನು ಕಡ್ಡಾಯಗೊಳಿಸಲಾಗಿದೆ. ಪಬ್ಗಳು, ರೆಸ್ಟೋರೆಂಟ್ಗಳು ಮತ್ತು ಬಾರ್ಗಳಲ್ಲಿ ಹೊಸ ವರ್ಷವನ್ನ ಆಚರಿಸಲು ಮಾಸ್ಕ್ ಕಡ್ಡಾಯವಾಗಿರುತ್ತದೆ. ಹೊಸ ವರ್ಷದ ಆಚರಣೆಗಳು ಬೆಳಿಗ್ಗೆ 1 ಗಂಟೆಯೊಳಗೆ ಕೊನೆಗೊಳ್ಳುತ್ತವೆ. ಆತಂಕ ಪಡುವ ಅಗತ್ಯವಿಲ್ಲ, ಮುನ್ನೆಚ್ಚರಿಕಾ ಕ್ರಮಗಳನ್ನ ತೆಗೆದುಕೊಳ್ಳಬೇಕು” ಎಂದರು.
BREAKING NEWS : ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಏಮ್ಸ್ ಆಸ್ಪತ್ರೆಗೆ ದಾಖಲು | Nirmala Sitharaman
ದೆಹಲಿಯಲ್ಲಿ ‘ವೀರ್ ಬಾಲ್ ದಿವಸ್’ ಆಚರಣೆಯಲ್ಲಿ ಪ್ರಧಾನಿ ಭಾಗಿ : ಗುರು ಗೋವಿಂದ್ ಸಿಂಗ್ ಪುತ್ರರಿಗೆ ಗೌರವ ಸಲ್ಲಿಕೆ
BREAKING NEWS: ರಾಜ್ಯ ಸರ್ಕಾರದಿಂದ ಬೆಂಗಳೂರಿಗೆ ಹೊಸ ಗೈಡ್ ಲೈನ್ಸ್ ರಿಲೀಸ್; ಮಾಸ್ಕ್ ಕಡ್ಡಾಯ