ಬೆಳಗಾವಿ : ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದ ಹೊತ್ತಲ್ಲೇ ಮರಾಠಿಗರು ಪುಂಡಾಟ ಮೆರೆದಿದ್ದು, ಅಧಿವೇಶನದ ಕರ್ತವ್ಯಕ್ಕೆ ಬರುತ್ತಿದ್ದ ವಾಹನದ ಮೇಲೆ ಕಲ್ಲು ತೂರಾಟ ಮಾಡಿರುವ ಘಟನೆ ನಡೆದಿದೆ.
ಬೆಳಗಾವಿಯ ಹೊರವಲಯದ ಸುವರ್ಣ ಸೌಧದ ಎದುರು ತಡರಾತ್ರಿ ಮರಾಠಿ ಪುಂಡರು ಪುಂಡಾಟಿಕೆ ಮೆರೆದಿದ್ದು, ಸರ್ಕಾರಿ ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಬೆಂಗಳೂರಿನಿಂದ ಬೆಳಗಾವಿಗೆ ಚಳಿಗಾಲ ಅಧಿವೇಶನಕ್ಕೆ ಕರ್ನಾಟಕ ರಾಜ್ಯ ಕೃಷಿ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ಗೆ ಸೇರಿದ ವಾಹನ ನಿಯೋಜಿಸಲಾಗಿತ್ತು. ಬೆಳಗಾವಿ ಪ್ರವೇಶಿಸುತ್ತಿದ್ದಂತೆ ವಾಹನ ಅಡ್ಡಗಟ್ಟಿದ ಪುಂಡರು ಕಲ್ಲು ತೋರಿದ್ದಾರೆ. ಘಟನೆಯಿಂದ ಬುಲೆರೋ ವಾಹನ ಮುಂಭಾಗದ ಗಾಜು ಪುಡಿ ಪುಡಿ ಆಗಿದೆ. ವಾಹನ ಚಾಲಕನಿಗೂ ಜೀವ ಬೆದರಿಕೆ ಹಾಕಿದ್ದಾರೆ
ಕಳೆದ ಚಳಿಗಾಲ ಅಧಿವೇಶನ ವೇಳೆಯೂ ಎಂಇಎಸ್ ಪುಂಡರು ಗಲಾಟೆ ಮಾಡಿದ್ದರು. 50ಕ್ಕೂ ಅಧಿಕ ಸರ್ಕಾರಿ ವಾಹನ ಮೇಲೆ ಕಲ್ಲು ತೂರಾಟ ನಡೆಸಿದ್ದು, ಇದೀಗ ಮತ್ತೆ ಸರ್ಕಾರಿ ವಾಹನದ ಮೇಲೆ ಕಲ್ಲು ತೂರಾಟ ನಡೆಸಿ ವಿಕೃತಿ ಮೆರೆದಿದ್ದಾರೆ.