ತುಮಕೂರು: ವೋಟರ್ ಗೇಟ್ ಹಗರಣದ ಪ್ರಮುಖ ಆರೋಪಿ ಕೆಂಪೇಗೌಡ ನನ್ನು ಬೆಂಗಳೂರು ಪೋಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿ ಕೆಂಪೇಗೌಡ ಪ್ರಕರಣ ದಾಖಲು ಆಗುತ್ತಿದ್ದ ಹಾಗೇ ತಲೆ ಮರೆಸಿಕೊಂಡಿದ್ದ. ತಲೆ ಮರೆಸಿಕೊಂಡಿದ್ದ ಈ ಆರೊಪಿಗೆ ಪೋಲಿಸರು ಹುಡುಕಾಟ ಶುರು ಮಾಡಿದ್ದರು. ಈ ನಡುವೆ ಕೆಂಪೇಗೌಡ ನನ್ನು ಪೋಲಿಸರು ತುಮಕೂರು ಸಮೀಪದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿ ಕೆಂಪೇಗೌಡ ಚಿಲುಮೆ ಸಂಸ್ಥೆಗೆ ಸಂಬಂಧಪಟ್ಟಂತೆ ಹಣಕಾಸು ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದ ಎನ್ನಲಾಗಿದೆ. ಸದ್ಯ ಪ್ರಕರಣ ಸಂಬಂಧ ಐಶ್ವರ್ಯ ಹಾಗೂ ಶೃತಿ ಎನ್ನುವವರನ್ನು ಕೂಡ ಪೋಲಿಸರು ಇಂದು ವಶಕ್ಕೆ ಪಡೆದುಕೊಂಡಿದ್ದು, ಅವರಿಂದ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಇದಲ್ಲದೇ ಚಿಲುಮೆ ಸಂಸ್ಥೆ ಮೇಲೆ ದಾಳಿ ನಡೆಸಿರುವ ಪೋಲಿಸರುಮಹತ್ವದ ದಾಖಲೆಯನ್ನು ಕೂಡ ವಶಕ್ಕೆ ಪಡೆದುಕೊಂಡಿದ್ದು, ಇದರಲ್ಲಿ ಸಚಿವರೊಬ್ಬರಿಗೆ ಸಂಬಂಧಿಸಿದ ಚೆಕ್ ಕೂಡ ಪತ್ತೆಯಾಗಿದೆ ಎನ್ನಲಾಗಿದ್ದು, ಪ್ರಕರಣ ಇನ್ನೊಂದು ತಿರುವು ಪಡೆದುಕೊಂಡಿದೆ. ಈ ನಡುವೆ ಸಂಸ್ಥೆಯ ಮುಖ್ಯಸ್ಥ ರವಿ ಕುಮಾರ್ ತಲೆ ಮರೆಸಿಕೊಂಡಿದ್ದು, ಆತನಿಗಾಗಿ ಕೂಡ ಪೋಲಿಸರು ಹುಡುಕಾಟ ಶುರು ಮಾಡಿದ್ದಾರೆ.