ಹುಬ್ಬಳ್ಳಿ : ಗಡಿ ವಿವಾದದ ನಡೆಯೂ ನಾಳೆ ಬೆಳಗಾವಿಯಲ್ಲಿ ಎಂಇಎಸ್ ಮಹಾಮೇಳಾವ್ ಸಮಾವೇಶವನ್ನು ಆಯೋಜಿಸಿರುವ ಕುರಿತಂತೆ ಎಂಇಎಸ್ ವಿರುದ್ಧ ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.
BIG NEWS : ʻಭಾರತವು ವಸುದೈವ ಕುಟುಂಬಕಂ ಸಿದ್ಧಾಂತವನ್ನು ನಂಬುತ್ತದೆʼ: ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂಇಎಸ್ ಪುಂಡಾಟ ಇದೇ ಮೊದಲಲ್ಲ.. 50 ವರ್ಷದಿಂದ ಎಂಇಎಸ್ ಪುಂಡಾಟ ಮಾಡುತ್ತಾ ಬಂದಿದೆ. ಅವರನ್ನು ಯಾವ ರೀತಿ ಹದ್ದುಬಸ್ತಿನಲ್ಲಿ ಇಡಬೇಕು ಎಂದು ಗೊತ್ತಿಲ್ಲ. ನಾವು ಅವರನ್ನು ಹದ್ದುಬಸ್ತಿನಲ್ಲಿಡುವ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.
BIG NEWS : ನೋಯ್ಡಾ ಎಕ್ಸ್ಪ್ರೆಸ್ವೇಯಲ್ಲಿ ಎರಡು ಬಸ್ಗಳ ನಡುವೆ ಡಿಕ್ಕಿ: ಮೂವರು ಸಾವು, ಹಲವರಿಗೆ ಗಾಯ
ಬೆಳಗಾವಿಯಲ್ಲಿ ಗಡಿ ಗದ್ದಲದ ನಡುವೆಯೂ ನಾಳೆಯಿಂದ ಚಳಿಗಾಲದ ಅಧಿವೇಶನ ನಡೆಯಲಿದ್ದು, ಈ ಹೊತ್ತಲ್ಲೇ ಮಹಾರಾಷ್ಟ್ರ ಏಕೀಕರಣ ಸಮಿತಿಯಿಂದ ಬೆಳಗಾವಿಯಲ್ಲಿ ಮಹಾ ಮೇಳಾವ್ ಆಯೋಜಿಸಲಾಗಿದೆ. ಮಹಾ ಮೇಳಾವ್ ನಲ್ಲಿ ಸಂಸದ ಧೈರ್ಯಶೀಲ ಮಾನೆ ಭಾಗಿಯಾಗಲಿದ್ದಾರೆ. ಬೆಳಗಾವಿ ನಗರದ ವಾಕ್ಸಿನ್ ಡಿಪೋದಲ್ಲಿ ಮಹಾ ಮೇಳಾವ್ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸಮಾವೇಶದಲ್ಲಿ ಮಾನೆ ಭಾಷಣ ಮಾಡಲಿದ್ದಾರೆ. ಹೀಗಾಗಿ ತಮಗೆ ವೈ ಪ್ಲಸ್ ಭದ್ರತೆ ನೀಡುವಂತೆ ಬೆಳಗಾವಿ ನಗರ ಪೊಲೀಸ್ ಕಮಿಷನರ್ ಗೆ ಅರ್ಜಿ ಸಲ್ಲಿಸಿದ್ದಾರೆ.