ಮುಂಬೈ : ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ಈಗಾಗ್ಲೇ ಗಡಿ ಕಿಚ್ಚು ತುಂಬಾ ಜೋರಾಗಿ ಉರಿಯುತ್ತಿದ್ದು, ಈಗ ಮಹಾರಾಷ್ಟ್ರ ನಾಯಕರು ಮತ್ತೊಂದು ತಗಾದೆ ತೆಗೆದಿದ್ದಾರೆ.
ಗಡಿ ವಿವಾದ ಬೆನ್ನೆಲ್ಲೇ ಮಹಾರಾಷ್ಟ್ರದಿಂದ ಮತ್ತೊಂದು ತಗಾದೆಗೆ ಸಜ್ಜಾಗಿದ್ದು, ಕರ್ನಾಟಕಕ್ಕೆ ಮಹಾರಾಷ್ಟ್ರ ಡ್ಯಾಂನಿಂದ ನೀರು ಕೊಡದಂತೆ ಮಹಾರಾಷ್ಟ್ರ ನಾಯಕರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಗಡಿ ಬಗ್ಗೆ ಚರ್ಚೆ ನಡೆಸುತ್ತಿದ್ದು, ಅಧಿವೇಶನದಲ್ಲಿ ಎನ್ಸಿಪಿ ಶಾಸಕ ಜಯಂತ ಪಾಟೀಲ್ ಈ ಹೇಳಿಕೆ ನೀಡಿದ್ದಾರೆ. ಈ ವೇಳೆ ಬೆಳಗಾವಿ ಎಂಇಎಸ್ ಪರವಾಗಿಯೂ ಕೆಲವರಿಂದ ಚರ್ಚೆ ನಡೆಯುತ್ತಿದ್ದು, ಗಡಿ ವಿವಾದ ಬೆನ್ನೆಲ್ಲೇ ಜಲ ವಿವಾದ ಸೃಷ್ಟಿಸಲು ನಾಯಕರು ಯತ್ನಿಸುತ್ತಿದ್ದಾರೆ.
ಇನ್ನು ಕರ್ನಾಟಕ ಸಿಎಂ ಬೊಮ್ಮಾಯಿ ಯಾವ ಭಾಷೆಯಲ್ಲಿ ಮಾತಾಡ್ತಾರೋ ಅವರಿಗೆ ಅದೇ ಭಾಷೆಯಲ್ಲೇ ಮಹಾರಾಷ್ಟ್ರ ಉತ್ತರ ಕೊಡಬೇಕಿದೆ. ಅವ್ರಿಗೆ ತುಂಬಾ ಸುಕ್ಕು ಬಂದಿದೆ. ಅದನ್ನ ಮಟ್ಟ ಹಾಕಬೇಕಂದ್ರೆ, ಮಹಾರಾಷ್ಟ್ರ ಡ್ಯಾಂನಿಂದ ನೀರು ಬಿಡಬಾರದು ಎಂದು ಸರ್ಕಾರಕ್ಕೆ ಎನ್ಸಿಪಿ ಶಾಸಕ ಜಯಂತ ಪಾಟೀಲ್ ಆಗ್ರಹಿಸಿದ್ದಾರೆ.
BIGG NEWS : ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ಸಿದ್ಧತೆ : ಜ.11 ರಿಂದ `ಬಸ್ ಯಾತ್ರೆ’ ಆರಂಭ
Viral Video : ಮುಗ್ಧ ‘ನಾಯಿ’ ಮೇಲೆ ಕ್ರೌರ್ಯ ಮೆರೆದ ವ್ಯಕ್ತಿಗೆ ಒದ್ದು ಬುದ್ದಿ ಕಲಿಸಿದ ‘ಗೋಮಾತೆ’