ಪಾಟ್ನಾ : ಬಾಂಗ್ಲಾದೇಶದ ಭಯೋತ್ಪಾದಕ ಸಂಘಟನೆ ಜೆಎಂಬಿಗೆ ಸಂಪರ್ಕ ಹೊಂದಿದ್ದ ಮೌಲಾನಾ ಮುಫ್ತಿ ಅಸ್ಗರ್ ಅಲಿ ಎನ್ನುವ ಆರೋಪಿಯನ್ನ ಮೋತಿಹಾರಿಯಲ್ಲಿ ಬಂಧಿಸಲಾಗಿದೆ. ಎನ್ಐಎ ನೀಡಿರುವ ಪ್ರಕಾರ, ಮುಫ್ತಿ ಮುಸ್ಲಿಂ ಯುವಕನನ್ನ ಆನ್ಲೈನ್ನಲ್ಲಿ ಬ್ರೈನ್ವಾಶ್ ಮಾಡುತ್ತಿದ್ದ ಮತ್ತು ಜಿಹಾದ್ಗೆ ಸೇರಲು ನಿರಂತರವಾಗಿ ತರಬೇತಿ ನೀಡುತ್ತಿದ್ದ.
ಯುಪಿಯ ಸಹರಾನ್ಪುರದ ವಿದ್ಯಾವಂತ ಮುಫ್ತಿಯೊಬ್ಬ ಬಾಂಗ್ಲಾದೇಶದ ಅಪಾಯಕಾರಿ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದು, ಆರೋಪಿಯ ಭಯೋತ್ಪಾದಕ ಸಂಪರ್ಕ ಬಯಲಿಗೆ ಬಂದ ನಂತರ ಎನ್ಐಎ ಸಕ್ರಿಯವಾಗಿದೆ.
ಮೌಲಾನಾ ಮುಫ್ತಿ ಅಸ್ಗರ್ ಬಾಂಗ್ಲಾದೇಶದ ಜೆಎಂಬಿಯ ಭಯೋತ್ಪಾದಕ ಸಂಘಟನೆ ಜಮಾತ್-ಉಲ್-ಮುಜಾಹಿದ್ದೀನ್ನ ಸಕ್ರಿಯ ಸದಸ್ಯ. ಮಂಗಳವಾರ, ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್ಐಎ) ತಂಡವು ಢಾಕಾ, ಮೋತಿಹಾರಿಯಲ್ಲಿ ದಾಳಿ ನಡೆಸಿದೆ. ಅಲ್ಲಿಂದ ಮೌಲಾನನ್ನ ತನ್ನ ವಶಕ್ಕೆ ತೆಗೆದುಕೊಂಡಿದೆ.
ಈ ಕಾರ್ಯಾಚರಣೆಯ ಸಂದರ್ಭದಲ್ಲಿ, ಮೌಲಾನಾನಿಂದ ಲ್ಯಾಪ್ಟಾಪ್ ಮತ್ತು ಎರಡು ಬ್ಯಾಗ್ಗಳನ್ನ ವಶಪಡಿಸಿಕೊಂಡಿದೆ.
ಬಾಂಗ್ಲಾದೇಶದ ಈ ಭಯೋತ್ಪಾದಕ ಸಂಘಟನೆಯನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ಬಂಧಿತ ಮೌಲಾನಾ ಮುಫ್ತಿ ಅಸ್ಗರ್ ಅಲಿ ಮೂಲತಃ ಮೋತಿಹಾರಿಯ ರಾಮಘರ್ವಾ ಸೇರಿದ್ದಾನೆ. ಎನ್ಐಎ ತನಿಖೆಯಲ್ಲಿ ಮೌಲಾನಾ ತನ್ನ ಗುಂಪಿಗೆ ಮುಸ್ಲಿಂ ಯುವಕರನ್ನ ಜೋಡಿಸಿ ಜಿಹಾದಿಗಳನ್ನಾಗಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ.