ನವದೆಹಲಿ : ದಕ್ಷಿಣದ ಖ್ಯಾತ ಸ್ಟಾರ್ ನಟ ವಿಜಯ್ ದೇವರಕೊಂಡ ಅವರಿಗೆ ಜಾರಿ ನಿರ್ದೇಶನಾಲಯ (ED) ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮನ್ಸ್ ನೀಡಿದೆ.
ಈ ಹಿಂದೆ ಈ ಪ್ರಕರಣದಲ್ಲಿ ಚಿತ್ರದ ನಿರ್ದೇಶಕರಾದ ಪುರಿ ಜಗನ್ನಾಥ್ ಮತ್ತು ಚಾರ್ಮಿ ಕೌರ್ ಅವರನ್ನೂ ವಿಚಾರಣೆಗೆ ಕರೆಸಲಾಗಿತ್ತು. ವರದಿಗಳ ಪ್ರಕಾರ, ಹವಾಲಾ ಹಣ ಸೇರಿದಂತೆ ವಿದೇಶಿ ನಿಧಿಯನ್ನ ಚಿತ್ರಕ್ಕೆ ಹೂಡಿಕೆ ಮಾಡಲಾಗಿದೆ ಎಂದು ಇ.ಡಿ ದೂರು ಸ್ವೀಕರಿಸಿದೆ.
ಆಗಸ್ಟ್ 25ರಂದು ‘ಲೈಗರ್’ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಇದನ್ನ ಸುಮಾರು 125 ಕೋಟಿ ಬಜೆಟ್’ನಲ್ಲಿ ನಿರ್ಮಾಣ ಮಾಡಲಾಯಿತು. ವಿಪರ್ಯಾಸ ಅಂದ್ರೆ, ಈ ಚಲನಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಯಾವುದೇ ವಿಶೇಷ ಪ್ರದರ್ಶನ ನೀಡಲಿಲ್ಲ.
‘ಲೈಗರ್’ ಚಿತ್ರದಲ್ಲಿ, ಅನನ್ಯಾ ಪಾಂಡೆ ಮತ್ತು ರಮ್ಯಾ ಕೃಷ್ಣನ್ ಅವರಂತಹ ತಾರೆಯರು ವಿಜಯ್ ದೇವರಕೊಂಡ ಅವರೊಂದಿಗೆ ಪ್ರಮುಖ ಪಾತ್ರದಲ್ಲಿದ್ದರು. ಇದನ್ನ ಉನ್ನತ ಮಟ್ಟದಲ್ಲಿಯೂ ಉತ್ತೇಜಿಸಲಾಯಿತು. ಆದ್ರೆ, ಅದು ಗಲ್ಲಾಪೆಟ್ಟಿಗೆಯಲ್ಲಿ ಮುಗ್ಗರಿಸಿತು. ಐಎಎನ್ಎಸ್ ಪ್ರಕಾರ, ವಿಜಯ್ ದೇವರಕೊಂಡ ಅವರನ್ನ ಚಿತ್ರಕ್ಕಾಗಿ ಮಾಡಿದ ಹೂಡಿಕೆ ಮತ್ತು ಅದರ ತಂಡಕ್ಕೆ ನೀಡಿದ ಹಣದ ಬಗ್ಗೆ ಪ್ರಶ್ನಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
BREAKING NEWS : ‘ಲೈಗರ್’ ಚಿತ್ರಕ್ಕೆ ಹೂಡಿದ ‘ಹಣ’ ಎಲ್ಲಿಂದ ಬಂತು.? ನಟ ‘ವಿಜಯ್ ದೇವರಕೊಂಡ’ಗೆ ‘ED’ ಕ್ಲಾಸ್
86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ಉತ್ತರ ಕನ್ನಡದ ಭುವನಗಿರಿಯಲ್ಲಿ ‘ಕನ್ನಡ ರಥ’ಕ್ಕೆ ಅದ್ಧೂರಿ ಚಾಲನೆ
‘SBI’ನಿಂದ ಗ್ರಾಹಕರ ‘ಸುರಕ್ಷಿತ ವಹಿವಾಟಿ’ಗೆ ಹೊಸ ಸೇವೆ ಆರಂಭ ; ಈಗ ಇಮೇಲ್’ಗೂ ಬರುತ್ತೆ ‘OTP’