ಇಂಧೋರ್: ಭಾರತ್ ಜೋಡೋ ಯಾತ್ರೆ ಮಧ್ಯಪ್ರದೇಶಕ್ಕೆ ಆಗಮಿಸುವ ಮುನ್ನ ಇಂದೋರ್ನಲ್ಲಿ ರಾಹುಲ್ ಗಾಂಧಿ ಹೆಸರಿನಲ್ಲಿ ಬೆದರಿಕೆ ಪತ್ರ ಬಂದಿದ್ದು ಸಂಚಲನ ಮೂಡಿಸಿದೆ. ಪತ್ರದಲ್ಲಿ ರಾಹುಲ್ ಗಾಂಧಿಗೆ ಕೊಲೆ ಬೆದರಿಕೆ ಹಾಕಲಾಗಿದೆ. ಪೊಲೀಸರು ಇದೀಗ ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ವಯನಾಡ್ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರಿಗೆ ಬಾಂಬ್ ಸ್ಫೋಟದ ಪತ್ರ ಇಂದೋರ್ನಲ್ಲಿ ಸಿಕ್ಕಿದೆ. ಶುಕ್ರವಾರ ಬೆಳಗ್ಗೆ ಸಿಹಿ ಅಂಗಡಿಯೊಂದರ ಹೊರಗೆ ಅಪರಿಚಿತ ವ್ಯಕ್ತಿಯೊಬ್ಬರು ಬೆದರಿಕೆ ಪತ್ರವನ್ನು ಬಿಟ್ಟು ಹೋಗಿದ್ದರು ಎಂದು ತಿಳಿದುಬಂದಿದೆ. ಸಮೀಪದಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಆರೋಪಿಗಾಗಿ ಶೋಧ ಆರಂಭಿಸಿದ್ದಾರೆ. ಅಪರಿಚಿತ ವ್ಯಕ್ತಿಯ ವಿರುದ್ಧ ಸೆಕ್ಷನ್ 507 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಪೊಲೀಸರು ಮಾಧ್ಯಮಮೊಂದಕ್ಕೆ ಖಚಿತಪಡಿಸಿದ್ದಾರೆ.
BREAKING NEWS: ಜೆಡಿಎಸ್ ಅಭ್ಯರ್ಥಿ ಪಟ್ಟಿ ಬಿಡುಗಡೆ ರೇವಣ್ಣನ ತಕರಾರು: ಹೆಚ್.ಡಿ.ಕುಮಾರಸ್ವಾಮಿ
ಇದೇ ನೋಡಿ ವಿಶ್ವದ ಅತ್ಯಂತ ದುಬಾರಿ ʻಚಹಾ ಎಲೆʼ… ಅದರ ಬೆಲೆ, ಪ್ರಯೋಜನೆ ಕೇಳಿದ್ರೆ ನೀವು ಶಾಖ್ ಆಗೋದು ಗ್ಯಾರಂಟಿ
BIGG NEWS : ಜಾನುವಾರುಗೆ ಡಿಕ್ಕಿ ಹೊಡೆದ ಮೈಸೂರು ಚೆನ್ನೈ ವಂದೇ ಭಾರತ್ ಎಕ್ಸ್ ಪ್ರೆಸ್ : ರೈಲಿಗೆ ಹಾನಿ
ಭಾರತೀಯ ರೈಲ್ವೆಯ 35,208 ಹುದ್ದೆಗಳ ಫಲಿತಾಂಶ ಪ್ರಕಟ, ಇಲ್ಲಿದೆ ಹೆಚ್ಚಿನ ಮಾಹಿತಿ | RRB NTPC Results