ಕೆಎನ್ಎನ್ಡಿಜಿಟಲ್ ಡೆಸ್ಕ್ : ಇಟಲಿಯ ಹಾಲಿಡೇ ದ್ವೀಪದಲ್ಲಿ ಭೂಕುಸಿತ ಸಂಭವಿಸಿದ್ದು, ಈ ಘಟನೆಯಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ನೀಡಿದ ಮೂಲಸೌಕರ್ಯ ಸಚಿವ ಮ್ಯಾಟಿಯೊ ಸಾಲ್ವಿನಿ, “ಇಶಿಯಾ ಭೂಕುಸಿತದಲ್ಲಿ ಎಂಟು ಜನರು ಸಾವನ್ನಪ್ಪಿದ್ದಾರೆ. ರಕ್ಷಕರು ಕಠಿಣ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದಾರೆ” ಎಂದಿದ್ದಾರೆ. ಇನ್ನು ಈ ಹಿಂದೆ ಭೂಕುಸಿತದ ನಂತರ ಹದಿಮೂರು ಮಂದಿ ನಾಪತ್ತೆಯಾಗಿದ್ದಾರೆ ಎಂಬ ಸುದ್ದಿ ಇತ್ತು.
ಅಗ್ನಿಶಾಮಕ ಅಧಿಕಾರಿಗಳು, ದ್ವೀಪದ ಉತ್ತರದಲ್ಲಿರುವ ಕ್ಯಾಸಮಿಸಿಯೋಲಾ ಟರ್ಮ್ನಲ್ಲಿ, “ಭೂಕುಸಿತದಲ್ಲಿ ಮನೆ ಸಂಪೂರ್ಣವಾಗಿ ನಾಶವಾಗಿದ್ದು, ಕಾಣೆಯಾದ ಜನರಿಗಾಗಿ ಹುಡುಕಾಟ ನಡೆಯುತ್ತಿದೆ” ಎಂದು ಹೇಳಿದ್ದಾರೆ. ಆದ್ರೆ, ANSA ಮತ್ತು AGI ಸುದ್ದಿ ಸಂಸ್ಥೆಗಳು ನಂತರ ಬೆಳಿಗ್ಗೆ ಭೂಕುಸಿತದ ನಂತರ 13 ಜನರು ಕಾಣೆಯಾಗಿದ್ದಾರೆ ಎಂದು ವರದಿ ಮಾಡಿದೆ. ಮಾಧ್ಯಮ ವರದಿಗಳ ಪ್ರಕಾರ, ಒಂದು ಕುಟುಂಬವು ಗಂಡ ಮತ್ತು ಹೆಂಡತಿ ಮತ್ತು ನವಜಾತ ಶಿಶುವನ್ನ ಹೊಂದಿತ್ತು. ಅವ್ರು ಭೂಕುಸಿತವಾದ ಸ್ಥಳಕ್ಕೆ ಹತ್ತಿರದಲ್ಲಿ ವಾಸಿಸುತ್ತಿದ್ದರು.
ಘಟನೆಯ ವಿಡಿಯೋ ಹೊರಬಿದ್ದಿದೆ.!
ಭೂ ಕುಸಿತದಿಂದಾಗಿ ಕಾರುಗಳು ಬೆಟ್ಟದಿಂದ ಜಾರಿ ಬಿದ್ದಿವೆ ಎಂದು ಅಗ್ನಿಶಾಮಕ ದಳ ತಿಳಿಸಿದೆ. ಅದೇ ಸಮಯದಲ್ಲಿ, ಕನಿಷ್ಠ ಒಂದು ವಾಹನವು ಸಮುದ್ರದಲ್ಲಿ ಕೊಚ್ಚಿಹೋಗಿದೆ, ಅದರಲ್ಲಿ ಇಬ್ಬರನ್ನು ರಕ್ಷಿಸಲಾಗಿದೆ. ಈ ಘಟನೆಯ ಭಯಾನಕ ವಿಡಿಯೋ ಕೂಡ ಮುನ್ನೆಲೆಗೆ ಬಂದಿದ್ದು, ಭೂಕುಸಿತದ ನಂತ್ರದ ಪರಿಸ್ಥಿತಿಯನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬಹುದು.
#italy #tragedy #island of #Ischia. Today around 5, in #Casamicciola #Terme , a landslide originated from the upper part of via Celario which reached the seafront in Piazza Anna De Felice. 8 dead and 13 missing including a baby pic.twitter.com/AfT2v59uZL
— Donato Yaakov Secchi (@doyaksec) November 26, 2022
ಪುರುಷರೇ ಎಚ್ಚರ..! 5 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡಿದ್ರೆ ʼಹೃದಯಘಾತ, ಪಾರ್ಶ್ವವಾಯು ಸಮಸ್ಯೆʼ ಹೆಚ್ಚಳ: ಅಧ್ಯಯನ