ನವದೆಹಲಿ : ಭಾರತದ ಹಿರಿಯ ಬ್ಯಾಟ್ಸ್ಮನ್ ಕೆ.ಎಲ್ ರಾಹುಲ್ʼಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಮತ್ತೊಂದು ಹಿನ್ನಡೆಯನ್ನ ಅನುಭವಿಸಿದ್ದಾರೆ ಎಂದು ಅಪೆಕ್ಸ್ ಕೌನ್ಸಿಲ್ ಸಭೆಯ ನಂತರ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತಿಳಿಸಿದ್ದಾರೆ. ಇನ್ನು ರಾಹುಲ್ಗೆ ಬೆಂಗಳೂರಿನಲ್ಲಿ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಸರಣಿಯ ಕೊನೆಯ ಭಾಗಕ್ಕಾಗಿ ವೆಸ್ಟ್ ಇಂಡೀಸ್ಗೆ ತೆರಳುವುದು ಅವರ ಚೇತರಿಕೆಯ ಮೇಲೆ ಅವಲಂಬಿತವಾಗಿದೆ ಎಂದಿದ್ದಾರೆ.
ಕಳೆದ ತಿಂಗಳು ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20ಐ ಸರಣಿಯ ಆರಂಭಕ್ಕೆ ಒಂದು ದಿನ ಮುಂಚಿತವಾಗಿ ಐಪಿಎಲ್ 2022 ಪೂರ್ಣಗೊಂಡಾಗಿನಿಂದ ರಾಹುಲ್ ಆಟದಿಂದ ಹೊರಗುಳಿದಿದ್ದಾರೆ. ಇನ್ನು ರಾಹುಲ್ ಅದರ ಚಿಕಿತ್ಸೆಗಾಗಿ ಜರ್ಮನಿಗೆ ಹಾರಿದ್ದರು. ಇನ್ನು ಕೋವಿಡ್ಗೆ ತುತ್ತಾಗುವ ಮೊದಲು ಚೆನ್ನಾಗಿ ಚೇತರಿಸಿಕೊಂಡಿದ್ದರು.
ರಾಹುಲ್ ಇತ್ತೀಚೆಗೆ ನೆಟ್ಸ್ನಲ್ಲಿ ತರಬೇತಿ ಪಡೆದ ವೀಡಿಯೊಗಳನ್ನ ಹಂಚಿಕೊಂಡರು, ಜೂಲನ್ ಗೋಸ್ವಾಮಿಯನ್ನ ಎದುರಿಸಿದರು. ಜುಲೈ 29ರಿಂದ ವೆಸ್ಟ್ ಇಂಡೀಸ್ ವಿರುದ್ಧದ ಟಿ20ಐ ಸರಣಿಗೆ ಅವರನ್ನು ಭಾರತದ ತಂಡದಲ್ಲಿ ಹೆಸರಿಸಲಾಗಿದೆ. ಆದ್ರೆ, ಅವರ ಲಭ್ಯತೆಯು ಫಿಟ್ನೆಸ್ಗೆ ಒಳಪಟ್ಟಿದೆ ಎನ್ನಲಾಗ್ತಿದೆ.