ನವದೆಹಲಿ : ದೆಹಲಿಯಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅಕ್ಷರಶಃ ಮ್ಯಾಜಿಕ್ ಮಾಡಿದ್ದು, ದೆಹಲಿ ಎಂಸಿಡಿಯ 250 ವಾರ್ಡ್ಗಳ ಪೈಕಿ 135 ಸ್ಥಾನಗಳನ್ನ ಗೆಲ್ಲುವ ಮೂಲಕ ಬಿಜೆಪಿಯ 15 ವರ್ಷಗಳ ಹಿಡಿತವನ್ನ ಅಂತ್ಯಗೊಳಿಸಿದೆ.
ದೆಹಲಿ ಎಂಸಿಡಿಯ 250 ವಾರ್ಡ್ಗಳ ಪೈಕಿ 245 ಸ್ಥಾನಗಳಿಗೆ ಚುನಾವಣೆ ಫಲಿತಾಂಶ ಬಂದಿದ್ದು, ಎಎಪಿ 132 ಮತ್ತು ಬಿಜೆಪಿ 103 ಸ್ಥಾನಗಳನ್ನ ವಶಪಡಿಸಿಕೊಂಡಿದೆ. ಕಾಂಗ್ರೆಸ್ ತನ್ನ ಖಾತೆಯಲ್ಲಿ 8 ಸ್ಥಾನ ಪಡೆದಿದೆ.
ಎಂಸಿಡಿ ಚುನಾವಣೆಯಲ್ಲಿ ಬಹುಮತ ಪಡೆದ ನಂತರ ಅರವಿಂದ್ ಕೇಜ್ರಿವಾಲ್, “ಇದೊಂದು ದೊಡ್ಡ ಗೆಲುವು. ಇದು ದೆಹಲಿಯ ಗೆಲುವು” ಎಂದರು.
BIGG NEWS: ಸಿದ್ರಾಮುಲ್ಲಾ ಖಾನ್ ಎಂದಿದ್ದಕ್ಕೆ ನನಗೇನು ಬೇಸರವಿಲ್ಲ; ಸಿದ್ದರಾಮಯ್ಯ