ಕೆಎನ್ಎನ್ಡಿಜಿಟಲ್ ಡೆಸ್ಕ್ : ಪ್ರಥಮ ಮಹಿಳೆ ಜಿಲ್ ಬೈಡನ್ಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದ್ದು, ‘ಸೌಮ್ಯ’ ರೋಗಲಕ್ಷಣಗಳನ್ನ ಹೊಂದಿದ್ದಾರೆ ಎಂದು ಅಧ್ಯಕ್ಷೀಯ ಕಚೇರಿ ತಿಳಿಸಿದೆ.
ದಕ್ಷಿಣ ಕೆರೊಲಿನಾದಲ್ಲಿ ಪ್ರಥಮ ಮಹಿಳೆಗೆ ಸೋಂಕು ದೃಢಪಟ್ಟಿದ್ದು, ಸೌಮ್ಯ ರೋಗಲಕ್ಷಣಗಳನ್ನು ಅನುಭವಿಸುತ್ತಿದ್ದಾರೆ ಮತ್ತು ಫೈಜರ್ ಇಂಕ್ʼನ ಪ್ಯಾಕ್ಸ್ಲೋವಿಡ್ ಆಂಟಿವೈರಲ್ ಔಷಧಗಳ ಕೋರ್ಸ್ ಶಿಫಾರಸು ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
71 ವರ್ಷದ ಪ್ರಥಮ ಮಹಿಳೆ ದಕ್ಷಿಣ ಕೆರೊಲಿನಾದ ಖಾಸಗಿ ನಿವಾಸದಲ್ಲಿ ಉಳಿಯಲಿದ್ದು, ಎರಡು ನೆಗೆಟಿವ್ ಕೋವಿಡ್ ಪರೀಕ್ಷೆಗಳನ್ನ ಪಡೆದ ನಂತರ ಮನೆಗೆ ಮರಳಲಿದ್ದಾರೆ ಎಂದು ಶ್ವೇತಭವನ ಮಂಗಳವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.