ನವದೆಹಲಿ : ಜಂಟಿ ಪ್ರವೇಶ ಪರೀಕ್ಷೆ (JEE)-ಮುಖ್ಯ ಪರೀಕ್ಷೆಯನ್ನ ಮುಂದೂಡಲಾಗಿದೆ ಮತ್ತು ಈಗ ಜುಲೈ 21ರ ಬದಲಿಗೆ ಜುಲೈ 25 ರಿಂದ ಪ್ರಾರಂಭವಾಗಲಿದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಬುಧವಾರ ಪ್ರಕಟಿಸಿದೆ. ಆದಾಗ್ಯೂ, ನಿರ್ಣಾಯಕ ಪರೀಕ್ಷೆಯನ್ನ ಮುಂದೂಡಲು ಕಾರಣವೇನು ಅನ್ನೋದನ್ನ ಸ್ಪಷ್ಟಪಡಿಸಿಲ್ಲ.
Second session of JEE-Main postponed, to begin from July 25 instead of July 21: National Testing Agency
— Press Trust of India (@PTI_News) July 20, 2022
ಅದ್ರಂತೆ, ಎನ್ಟಿಎ, “ಜುಲೈ 25 ರಿಂದ ಜೆಇಇ-ಮೇನ್ನ ಎರಡನೇ ಅಧಿವೇಶನ ಪ್ರಾರಂಭವಾಗಲಿದ್ದು, ಇದರಲ್ಲಿ ಸುಮಾರು 500 ನಗರಗಳ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ 6.29 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಯನ್ನು ತೆಗೆದುಕೊಳ್ಳುತ್ತಾರೆ” ಈ ಪರೀಕ್ಷಾ ಕೇಂದ್ರಗಳಲ್ಲಿ 17 ಕೇಂದ್ರಗಳು ಭಾರತದ ಹೊರಗಿವೆ. ಇದಕ್ಕಾಗಿ ಪ್ರವೇಶ ಪತ್ರವನ್ನು ಗುರುವಾರದಿಂದ ಡೌನ್ಲೋಡ್ ಮಾಡಿಕೊಳ್ಳಬಹುದು” ಎಂದಿದೆ.
ಅದ್ರಂತೆ, ಜೆಇಇ ಮುಖ್ಯ ಸೆಷನ್ 2 ಪ್ರವೇಶ ಪತ್ರ ನಾಳೆ ಬಿಡುಗಡೆಯಾಗಲಿದೆ ಎಂದು ಎನ್ಟಿಎ ತಿಳಿಸಿದೆ. ಅದ್ರಂತೆ, ಅಭ್ಯರ್ಥಿಗಳು jeemain.nta.nic.in ಭೇಟಿ ನೀಡಿ, ಪ್ರವೇಶ ಪತ್ರಗಳನ್ನ ಡೌನ್ಲೋಡ್ ಮಾಡಿಕೊಳ್ಳಬೋದು. ಇನ್ನು ಇತ್ತೀಚಿನ ನವೀಕರಣಗಳಿಗಾಗಿ www.nta.ac.in ಅಧಿಕೃತ ವೆಬ್ಸೈಟ್ಗಳಿಗೆ ಭೇಟಿ ನೀಡಲು ಸೂಚಿಸಲಾಗಿದೆ.
ಜೆಇಇ ಮೇನ್ಸ್ ಪ್ರವೇಶ ಪತ್ರಗಳನ್ನ ಡೌನ್ಲೋಡ್ ಮಾಡುವುದು ಹೇಗೆ?
– ಭೇಟಿ – jeemain.nta.nic.in
– ಮುಖಪುಟದಲ್ಲಿ, ಸೆಷನ್ 2 ಅಡ್ಮಿಟ್ ಕಾರ್ಡ್ ಲಿಂಕ್ ಅನ್ನು ಕ್ಲಿಕ್ ಮಾಡಿ.
– ನಿಮ್ಮ ರೋಲ್ ನಂಬರ್ ಮತ್ತು ಜನ್ಮ ದಿನಾಂಕವನ್ನು ಹಾಕಿ
– ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ.
ಅಂದ್ಹಾಗೆ, ಜೆಇಇ ಮೇನ್ನ ಎರಡನೇ ಅಧಿವೇಶನವನ್ನ ಈ ಹಿಂದೆ ಜುಲೈ 21ರಿಂದ ಜುಲೈ 30 ರವರೆಗೆ ನಿಗದಿಪಡಿಸಲಾಗಿತ್ತು. ಇನ್ನು ಮೊದಲ ಅಧಿವೇಶನ ಜೂನ್ 23 ರಿಂದ ಜೂನ್ 29 ರವರೆಗೆ ನಡೆಯಿತು.