ಬೆಂಗಳೂರು : ನಾಳೆ ನಿವೃತ್ತಿಯಾಗಬೇಕಿದ್ದ ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ. ಸಿ.ಎನ್ ಮಂಜುನಾಥ್ ಅವ್ರ ಸೇವಾವಧಿಯನ್ನ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅದ್ರಂತೆ, ಮಂಜುನಾಥ್ ಅವ್ರ ಸೇವಾವಧಿ ಒಂದು ವರ್ಷ ವಿಸ್ತರಣೆಯಾಗಲಿದೆ.
ಈ ಕುರಿತು ಆದೇಶ ಹೊರಡಿಸಿರುವ ರಾಜ್ಯ ಸರ್ಕಾರ, ಡಾ. ಸಿ.ಎನ್ ಮಂಜುನಾಥ್ ಅವ್ರ ಸೇವೆಯನ್ನ ಪರಿಗಣಿಸಿ ಅವಧಿ ವಿಸ್ತರಿಸಿದೆ. ಇನ್ನು ಈ ಕುರಿತು ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಡಾ.ಮಂಜುನಾಥ್ ಅವ್ರಿಗೆ ಕರೆ ಮಾಡಿ ಸೇವಾವಧಿ ವಿಸ್ತರಿಸಿದ ವಿಷಯ ತಿಳಿಸಿದ್ದಾರೆ ಎನ್ನಲಾಗ್ತಿದೆ. ಈ ಮೂಲಕ ಡಾ. ಮಂಜುನಾಥ್ ಸೇವಾವಧಿ ಮತ್ತೆ ಒಂದು ವರ್ಷ ಹೆಚ್ಚಳವಾಗಿದೆ.