ಕೆಎನ್ಎನ್ಡಿಜಿಟಲ್ ಡೆಸ್ಕ್ : ಹಿಜಾಬ್ ತಪ್ಪಾಗಿ ಧರಿಸಿದ್ದಕ್ಕಾಗಿ ಇರಾನ್ನ ನೈತಿಕತೆಯ ಪೊಲೀಸರು ಬಂಧಿಸಿದ ಬಾಲಕಿ ಮೆಹ್ಸಾ ಅಮಿನಿ ಸಾವಿನ ನಂತ್ರ ಇರಾನ್ನಲ್ಲಿ ಹಿಜಾಬ್ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ . ಒಂದೆಡೆ ಈ ಆಂದೋಲನ ಕ್ರಮೇಣ ದೊಡ್ಡದಾಗುತ್ತಿದ್ದರೆ ಮತ್ತೊಂದೆಡೆ ಪೊಲೀಸರು ಮತ್ತು ಆಡಳಿತ ಮಹಿಳೆಯರ ವಿರುದ್ಧ ಆಕ್ರಮಣಕಾರಿ ಕ್ರಮ ಕೈಗೊಳ್ಳುತ್ತಿದೆ.
ಎಎನ್ಐ ಪ್ರಕಾರ, ಇರಾನ್ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಕನಿಷ್ಠ 41 ಜನರು ಸಾವನ್ನಪ್ಪಿದ್ದಾರೆ. ಅದೇ ಸಮಯದಲ್ಲಿ, ಈ ಪ್ರಕರಣದಲ್ಲಿ 700 ಕ್ಕೂ ಹೆಚ್ಚು ಮಹಿಳೆಯರನ್ನು ಬಂಧಿಸಲಾಗಿದೆ.
22 ವರ್ಷದ ಕುರ್ದಿಶ್ ಮಹಿಳೆ ಮಹ್ಸಾ ಅಮಿನಿ ಅನ್ನೋ ಯುವತಿ ಹಿಜಾಬ್ ಸರಿಯಾಗಿ ಧರಿಸಿಲ್ಲ ಎಂದು ಆರೋಪಿಸಿ ಇರಾನ್ನ ನೈತಿಕ ಪೊಲೀಸರು ಬಂಧಿಸಿದ ನಂತ್ರ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದು, ಪ್ರತಿಭಟನೆಗೆ ಕಾರಣವಾಗಿದೆ.