ಭೋಪಾಲ : ಭೋಪಾಲದಿಂದ ಮುಂಬೈಗೆ ತೆರಳುತ್ತಿದ್ದ ಇಂಡಿಗೋ ವಿಮಾನವು ತಾಂತ್ರಿಕ ದೋಷದಿಂದಾಗಿ ಟೇಕ್ ಆಫ್ ಆದ ನಂತ್ರ ಸೋಮವಾರ ಸ್ಥಗಿತಗೊಂಡಿದೆ ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ನಂತ್ರ ವಿಮಾನವು ಮಧ್ಯಪ್ರದೇಶದ ರಾಜಾ ಭೋಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮರಳಿದೆ.
ಈ ವಿಮಾನ 183 ಪ್ರಯಾಣಿಕರನ್ನ ಹೊತ್ತೊಯ್ಯುತ್ತಿದ್ದು, ಈ ಪೈಕಿ 117 ಪ್ರಯಾಣಿಕರನ್ನ ದೆಹಲಿಗೆ ತೆರಳಲು ಸಂಜೆ ಮತ್ತೊಂದು ವಿಮಾನದಲ್ಲಿ ಅನುಕೂಲ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
“ಉಳಿದ ಪ್ರಯಾಣಿಕರನ್ನ ಇತರ ವಿಮಾನಗಳಲ್ಲಿ ಮತ್ತು ವಸತಿ ವ್ಯವಸ್ಥೆ ಮಾಡುವ ಮೂಲಕ ಸರಿಹೊಂದಿಸಲಾಗಿದೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.