ನವದೆಹಲಿ : ಆಂಡ್ರಾಯ್ಡ್ ಮೊಬೈಲ್ ಸಾಧನಗಳಿಗೆ ಸಂಬಂಧಿಸಿದ ಸ್ಪರ್ಧಾತ್ಮಕ ವಿರೋಧಿ ಅಭ್ಯಾಸಗಳಿಗಾಗಿ ದೇಶದ ಸ್ಪರ್ಧಾತ್ಮಕ ನಿಯಂತ್ರಕ ಆಲ್ಫಾಬೆಟ್ ಇಂಕ್’ನ ಗೂಗಲ್ ಗೆ ₹ 1,337 ಕೋಟಿ ದಂಡ ವಿಧಿಸಿದೆ.
CCI (Competition Commission of India) imposes monetary penalty of Rs 1337.76 crores on Google for abusing dominant position in multiple markets in the Android Mobile device ecosystem: CCI pic.twitter.com/Xaelu27J74
— ANI (@ANI) October 20, 2022
“ಆಂಡ್ರಾಯ್ಡ್ ಮೊಬೈಲ್ ಸಾಧನ ಪರಿಸರ ವ್ಯವಸ್ಥೆಯಲ್ಲಿ ಅನೇಕ ಮಾರುಕಟ್ಟೆಗಳಲ್ಲಿ ಪ್ರಾಬಲ್ಯದ ಸ್ಥಾನವನ್ನ ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ ಗೂಗಲ್ಗೆ ದಂಡ ವಿಧಿಸಲಾಗಿದೆ” ಎಂದು ಭಾರತೀಯ ಸ್ಪರ್ಧಾತ್ಮಕ ಆಯೋಗ ಅಥವಾ ಸಿಸಿಐ ಟ್ವೀಟ್ ಮಾಡಿದೆ.
ಗೂಗಲ್ ಆಂಡ್ರಾಯ್ಡ್ ಓಎಸ್ (ಆಪರೇಟಿಂಗ್ ಸಿಸ್ಟಂ) ನ್ನ ನಿರ್ವಹಿಸುತ್ತದೆ ಮತ್ತು ಅದರ ಇತರ ಸ್ವಾಮ್ಯದ ಅಪ್ಲಿಕೇಶನ್ಗಳಿಗೆ ಪರವಾನಗಿ ನೀಡುತ್ತದೆ. OEM ಗಳು (ಮೂಲ ಉಪಕರಣ ತಯಾರಕರು) ತಮ್ಮ ಮೊಬೈಲ್ ಸಾಧನಗಳಲ್ಲಿ ಈ ಓಎಸ್ ಮತ್ತು Googleನ ಅಪ್ಲಿಕೇಶನ್’ಗಳನ್ನ ಬಳಸುತ್ತವೆ.
ಅದರಂತೆ, ಮೊಬೈಲ್ ಅಪ್ಲಿಕೇಶನ್ ಡಿಸ್ಟ್ರಿಬ್ಯೂಷನ್ ಅಗ್ರಿಮೆಂಟ್ (MADA) ನಂತಹ ತಮ್ಮ ಹಕ್ಕುಗಳು ಮತ್ತು ಬಾಧ್ಯತೆಗಳನ್ನು ನಿಯಂತ್ರಿಸಲು ಅವ್ರು ಅನೇಕ ಒಪ್ಪಂದಗಳನ್ನ ಮಾಡಿಕೊಳ್ಳುತ್ತಾರೆ.