ನವದೆಹಲಿ : ಶ್ರೇಯಸ್ ಅಯ್ಯರ್, ಶಹಬಾಜ್ ಅಹ್ಮದ್ ಮತ್ತು ಉಮೇಶ್ ಯಾದವ್ ಅವರನ್ನ ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಟಿ 20ಐ ಸರಣಿಯನ್ನು ಆಡಲಿರುವ ಭಾರತ ತಂಡದಲ್ಲಿ ಸೇರಿಸಲಾಗಿದೆ.
“ಬೆನ್ನಿನ ಗಾಯದಿಂದಾಗಿ ದೀಪಕ್ ಹೂಡಾ ಮುಂಬರುವ ಮಾಸ್ಟರ್ ಕಾರ್ಡ್ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಹೊರಗುಳಿದಿದ್ದಾರೆ. ಆಲ್ರೌಂಡರ್ ತಮ್ಮ ಗಾಯದ ಹೆಚ್ಚಿನ ನಿರ್ವಹಣೆಗಾಗಿ ಎನ್ಸಿಎಯಲ್ಲಿದ್ದಾರೆ” ಎಂದು ಬಿಸಿಸಿಐ ಹೇಳಿದೆ.
“ಹಾರ್ದಿಕ್ ಪಾಂಡ್ಯ ಮತ್ತು ಭುವನೇಶ್ವರ್ ಕುಮಾರ್ ಕೂಡ ಕಂಡೀಷನಿಂಗ್ ಸಂಬಂಧಿತ ಕೆಲಸಗಳಿಗಾಗಿ ಎನ್ಸಿಎಗೆ ವರದಿ ಮಾಡಿದ್ದರೆ, ಅರ್ಷ್ದೀಪ್ ಸಿಂಗ್ ತಿರುವನಂತಪುರಂನಲ್ಲಿ ತಂಡದೊಂದಿಗೆ ಸಂಪರ್ಕ ಹೊಂದಿದ್ದಾರೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕೋವಿಡ್ -19 ನಿಂದ ಚೇತರಿಸಿಕೊಳ್ಳಲು ವಿಫಲವಾದ ಕಾರಣ ಭಾರತದ ವೇಗಿ ಮೊಹಮ್ಮದ್ ಶಮಿ ಅವರನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟಿ20ಐ ಸರಣಿಯಿಂದ ಹೊರಗಿಡಲಾಗಿದೆ.
“ಮೊಹಮ್ಮದ್ ಶಮಿ ಇನ್ನೂ ಕೋವಿಡ್ 19 ರಿಂದ ಸಂಪೂರ್ಣ ಚೇತರಿಸಿಕೊಂಡಿಲ್ಲ. ಹಾಗಾಗಿ ಮೂರು ಪಂದ್ಯಗಳ ಟಿ20ಐ ಸರಣಿಯಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಅಖಿಲ ಭಾರತ ಹಿರಿಯರ ಆಯ್ಕೆ ಸಮಿತಿಯು ಶಮಿ ಅವರ ಬದಲಿ ಆಟಗಾರನಾಗಿ ಉಮೇಶ್ ಯಾದವ್ ಮತ್ತು ಹೂಡಾ ಬದಲಿಗೆ ಶ್ರೇಯಸ್ ಅಯ್ಯರ್ ಅವರನ್ನು ಹೆಸರಿಸಿದೆ. ಶಹಬಾಜ್ ಅಹ್ಮದ್ ಅವರನ್ನು ಟಿ20ಐ ತಂಡಕ್ಕೆ ಸೇರಿಸಲಾಗಿದೆ” ಎಂದು ಬಿಸಿಸಿಐ ತಿಳಿಸಿದೆ.
🚨 UPDATE 🚨: Umesh Yadav, Shreyas Iyer and Shahbaz Ahmed added to India’s squad. #TeamIndia | #INDvSA | @mastercardindia
More Details 🔽https://t.co/aLxkG3ks3Y
— BCCI (@BCCI) September 28, 2022
ಭಾರತ ತಂಡ ಇಂತಿದೆ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಯಜುವೇಂದ್ರ ಚಹಲ್, ಅಕ್ಷರ್ ಪಟೇಲ್, ಅರ್ಷ್ದೀಪ್ ಸಿಂಗ್, ಹರ್ಷಲ್ ಪಟೇಲ್, ದೀಪಕ್ ಚಹರ್, ಜಸ್ಪ್ರೀತ್ ಬುಮ್ರಾ, ಉಮೇಶ್ ಯಾದವ್, ಶ್ರೇಯಸ್ ಅಯ್ಯರ್, ಶಹಬಾಜ್ ಅಹ್ಮದ್.