ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಘೋರ ದುರಂತವೊಂದು ಸಂಭವಿಸಿದ್ದು, ಶಿಕ್ಷಕಿ ಬೈದಿದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
BIGG NEWS : ಹಿಂದಿನ ಸರ್ಕಾರದ `PSI’ ನೇಮಕಾತಿಯಲ್ಲೂ ಗೋಲ್ ಮಾಲ್ : `CID’ ತನಿಖೆಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗ
ಬೆಂಗಳೂರಿನ ದೊಡ್ಡಬಾಣಸವಾಡಿಯ ಮರಿಯಂ ನಿಲಯ ಇಂಗ್ಲಿಷ್ ಶಾಲೆಯಲ್ಲಿ ಘಟನೆ ನಡೆದಿದೆ. ಶಾಲೆ ಶಿಕ್ಷಕಿ ಶಾಲಿನಿ ಎಂಬುವರು 10 ನೇ ತರಗತಿ ವಿದ್ಯಾರ್ಥಿನಿ ಅಮೃತಾಗೆ ಬೈದಿದ್ದಕ್ಕೆ ಮನನೊಂದು ಅಮೃತ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಸದ್ಯ ವಿದ್ಯಾರ್ಥಿನಿ ಅಮೃತ ಶವವನ್ನು ಮರಿಯಂ ನಿಲಯ ಇಂಗ್ಲಿಷ್ ಮೀಡಿಯಂ ಶಾಲೆಯ ಮುಂದೆ ಇಟ್ಟು ಪೋಷಕರು ಪ್ರತಿಭಟನೆ ನಡೆಸುತ್ತಿದ್ದಾರೆ. ವಿದ್ಯಾರ್ಥಿನಿ ಅಮೃತಾ ಸಾವಿಗೆ ಶಿಕ್ಷಕಿ ಶಾಲಿನಿ ಕಾರಣ ಎಂದು ಆರೋಪಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
BIGG NEWS: ಜ್ಞಾನವಾಪಿ ಮಸೀದಿ ಪ್ರಕರಣ : ಇಂದು ವಾರಣಾಸಿ ನ್ಯಾಯಾಲಯ ತೀರ್ಪು ನೀಡುವ ಸಾಧ್ಯತೆ| Gyanvapi mosque case