ನವದೆಹಲಿ: ಪಾಕಿಸ್ತಾನದ ಚುನಾವಣಾ ಆಯೋಗದ ಕಚೇರಿಯ ಹೊರಗೆ ಶುಕ್ರವಾರ ಗುಂಡಿನ ದಾಳಿ ನಡೆದ ಘಟನೆ ವರದಿಯಾಗಿದೆ. ತೋಶಾಖಾನಾ ಪ್ರಕರಣದಲ್ಲಿ ಸುಳ್ಳು ಹೇಳಿಕೆ ನೀಡಿದ್ದಕ್ಕಾಗಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವ್ರನ್ನ ಐದು ವರ್ಷಗಳ ಕಾಲ ಸಂಸತ್ತಿನಿಂದ ಅನರ್ಹಗೊಳಿಸಿದ ಹಿನ್ನೆಲೆಯಲ್ಲಿ ಇದು ಬಂದಿದೆ.
ಸುದ್ದಿ ಸಂಸ್ಥೆ ಪಿಟಿಐ ವರದಿಯ ಪ್ರಕಾರ, ಈ ನಿರ್ಧಾರವನ್ನ ಐವರು ಸದಸ್ಯರ ಪೀಠವು ಸರ್ವಾನುಮತದಿಂದ ತೆಗೆದುಕೊಂಡಿದೆ. ಆದಾಗ್ಯೂ, ಘೋಷಣೆ ಸಂದರ್ಭದಲ್ಲಿ ಪಂಜಾಬ್’ನ ಸದಸ್ಯರು ಹಾಜರಿರಲಿಲ್ಲ.
ಆಡಳಿತಾರೂಢ ಸಮ್ಮಿಶ್ರ ಸರ್ಕಾರದ ಸಂಸದರು ಆಗಸ್ಟ್’ನಲ್ಲಿ 70 ವರ್ಷದ ಖಾನ್ ವಿರುದ್ಧ ಪಾಕಿಸ್ತಾನದ ಚುನಾವಣಾ ಆಯೋಗದಲ್ಲಿ (ECP) ಪ್ರಕರಣ ದಾಖಲಿಸಿದ್ದರು, ಉಡುಗೊರೆಗಳ ಮಾರಾಟದಿಂದ ಬರುವ ಆದಾಯವನ್ನ ಬಹಿರಂಗಪಡಿಸಲು ವಿಫಲವಾದ ಕಾರಣ ಅವರನ್ನ ಅನರ್ಹಗೊಳಿಸುವಂತೆ ಕೋರಿದರು.
ಇಸಿಪಿ ಸೆಪ್ಟೆಂಬರ್ 19ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಸಿಕಂದರ್ ಸುಲ್ತಾನ್ ರಾಜಾ ನೇತೃತ್ವದ ಇಸಿಪಿಯ ನಾಲ್ಕು ಸದಸ್ಯರ ಪೀಠವು ಶುಕ್ರವಾರ ಖಾನ್ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಮತ್ತು ಸಂಸತ್ತಿನ ಸದಸ್ಯ ಸ್ಥಾನದಿಂದ ಅನರ್ಹರಾಗಿದ್ದಾರೆ ಎಂದು ಸರ್ವಾನುಮತದಿಂದ ತೀರ್ಪು ನೀಡಿದೆ.