ಬೆಂಗಳೂರು : ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಜೈಲು ಸೇರಿರುವ ಪ್ರಮುಖ ಆರೋಪಿ ಎಡಿಜಿಪಿ ಅಮೃತ್ ಪಾಲ್ ಜಾಮೀನು ಅರ್ಜಿ ವಜಾಗೊಳಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಬೆಂಗಳೂರಿನ 1ನೇ ಎಸಿಎಂಎಂ ಕೋರ್ಟ್ನಿಂದ ಆದೇಶ ಹೊರ ಬಿದ್ದಿದ್ದು, “ಎಡಿಜಿಪಿ ಅಮೃತ್ ಪಾಲ್ ಪರೀಕ್ಷೆಯ ನೇತೃತ್ವ ವಹಿಸಿದ್ದರು. ಉತ್ತರ ಪತ್ರಿಕೆಗಳಿದ್ದ ಸ್ಟ್ರಾಂಗ್ ರೂಮ್ ಕೀ ಪಾಲ್ ಬಳಿಯಿತ್ತು. ಅವ್ರು ಅದನ್ನ ಇತರೆ ಆರೋಪಿಗಳಿಗೆ ನೀಡಿದ್ದರು. ಇನ್ನು ಒಎಂಆರ್ ಶೀಟ್ ತಿದ್ದಿರುವುದು ಪಿಎಸ್ಎ ವರದಿಯಲ್ಲಿ ದೃಢಪಟ್ಟಿದೆ. ಹೀಗಾಗಿ ಅಮೃತ್ ಪಾಲ್ಗೆ ಜಾಮೀನು ನೀಡದಂತೆ ಸಿಐಡಿ ಪರ ಎಸ್ಪಿಪಿ ಪ್ರಸನ್ನ ವಾದ ಮಂಡಿಸಿದ್ರು.
ಸಧ್ಯ ಸಿಐಡಿ ಪರ ವಕೀಲರ ವಾದಕ್ಕೆ ಸ್ಪಂದಿಸಿದ ನ್ಯಾಯಾಲಯ ಎಡಿಜಿಪಿ ಅಮೃತ್ ಪಾಲ್ ಜಾಮೀನು ಅರ್ಜಿ ವಜಾಗೊಳಿಸಿ ಆದೇಶ ಹೊರಡಿಸಿದೆ.