ನವದೆಹಲಿ : ಹಿರಿಯ ಐಎಎಸ್ ಅಧಿಕಾರಿ ಸುನಿಲ್ ಕುಮಾರ್ ಗುಪ್ತಾ ಅವರನ್ನ ಉಪರಾಷ್ಟ್ರಪತಿ ಜಗದೀಪ್ ಧಂಕರ್ ಅವರ ಕಾರ್ಯದರ್ಶಿಯಾಗಿ ಬುಧವಾರ ನೇಮಿಸಲಾಗಿದೆ ಎಂದು ಸಿಬ್ಬಂದಿ ಸಚಿವಾಲಯದ ಆದೇಶದಲ್ಲಿ ತಿಳಿಸಲಾಗಿದೆ.
1987ರ ಬ್ಯಾಚ್ನ ಇಂಡಿಯನ್ ಅಡ್ಮಿನಿಸ್ಟ್ರೇಟಿವ್ ಸರ್ವಿಸ್ (ಐಎಎಸ್) ಅಧಿಕಾರಿಯಾಗಿರುವ ಗುಪ್ತಾ, ಪ್ರಸ್ತುತ ತಮ್ಮ ಕೇಡರ್ ರಾಜ್ಯವಾದ ಪಶ್ಚಿಮ ಬಂಗಾಳದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಗುಪ್ತಾ ಅವರು ಅಧಿಕಾರ ವಹಿಸಿಕೊಂಡ ದಿನದಿಂದ 2023ರ ಡಿಸೆಂಬರ್ 31 ರವರೆಗೆ ಜಾರಿಗೆ ಬರುವಂತೆ ಡೆಪ್ಯುಟೇಶನ್ ಆಧಾರದ ಮೇಲೆ ಕಾರ್ಯದರ್ಶಿಯ ಶ್ರೇಣಿ ಮತ್ತು ವೇತನದಲ್ಲಿ ಭಾರತದ ಉಪರಾಷ್ಟ್ರಪತಿಯ ಕಾರ್ಯದರ್ಶಿಯಾಗಿ ಗುಪ್ತಾ ಅವರನ್ನು ನೇಮಕ ಮಾಡಲು ಸಂಪುಟದ ನೇಮಕಾತಿ ಸಮಿತಿಯು ಅನುಮೋದನೆ ನೀಡಿದೆ.