ನವದೆಹಲಿ: ನೇಪಾಳದ ನೂತನ ಪ್ರಧಾನಿ ಪುಷ್ಪ ಕಮಲ್ ದಹಲ್ ‘ಪ್ರಚಂಡ’ “ನಾವು ಭಾರತದೊಂದಿಗೆ ಉತ್ತಮ ಸಂಬಂಧವನ್ನು ಬಯಸುತ್ತೇವೆ” ಎಂದು ಹೇಳಿದರು. “ನಾನು ಭಾರತದ ವಿರೋಧಿಯಲ್ಲ, ಹಳೆಯ ವಿವಾದಗಳನ್ನ ಮರೆತು ಮುಂದೆ ಸಾಗುತ್ತೇನೆ” ಎಂದು ಪ್ರಚಂಡ ಹೇಳಿದರು. ಸಿಪಿಎನ್-ಮಾವೋವಾದಿ ಕೇಂದ್ರದ ಅಧ್ಯಕ್ಷ ಪುಷ್ಪಾ ಕಮಲ್ ದಹಲ್ “ಪ್ರಚಂಡ” ಅವರನ್ನ ನೇಪಾಳದ ನೂತನ ಪ್ರಧಾನಿಯಾಗಿ ಅಧ್ಯಕ್ಷ ಬಿದ್ಯಾ ದೇವಿ ಭಂಡಾರಿ ಭಾನುವಾರ ನೇಮಕ ಮಾಡಿದ್ದಾರೆ.
“ಜನಾದೇಶದ ಪ್ರಕಾರ, ದೇಶದಲ್ಲಿ ಸರ್ಕಾರವನ್ನ ರಚಿಸಲಾಗಿದೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕೆಂದು ಸಾರ್ವಜನಿಕರು ಬಯಸಿದರು. ಇನ್ನು ಅದಕ್ಕಾಗಿಯೇ ಅವರು ಒಟ್ಟಾಗಿ ಸರ್ಕಾರವನ್ನ ರಚಿಸಿದರು. ನಮ್ಮ ಸರ್ಕಾರ ತನ್ನ ಅವಧಿಯನ್ನು ಪೂರ್ಣಗೊಳಿಸುತ್ತದೆ. ಸಂವಿಧಾನದ ಪ್ರಕಾರ ಕೆಲಸ ಮಾಡಲಾಗುವುದು” ಎಂದು ಪ್ರಧಾನಿ ಹೇಳಿದರು.
BREAKING NEWS : ಅಕ್ರಮ ವೋಟರ್ ಐಡಿ ಕೇಸ್ : ‘ಚಿಲುಮೆ’ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಿ ‘ಬಿಬಿಎಂಪಿ’ ಆದೇಶ
ಸಿಎಂ ಬೊಮ್ಮಾಯಿಯನ್ನು ಹೈಕಮಾಂಡ್ ಕೀ ಕೊಟ್ಟು ಕುಣಿಸುತ್ತಿದೆ: ಟ್ವೀಟ್ ನಲ್ಲಿ ಕಾಂಗ್ರೆಸ್ ವ್ಯಂಗ್ಯ
WATCH VIDEO: ವಿಡಿಯೋ ಮಾಡಲು ಬಳಿ ವಿದ್ಯುತ್ ಕಂಬ ಏರಿದ ಯುವಕನಿಗೆ ಕರೆಂಟ್ ಶಾಕ್ : ವಿಡಿಯೋ ವೈರಲ್