ಬೆಂಗಳೂರು : ಗಣೇಶ ಹಬ್ಬದ ಸಂಭ್ರಮದಲ್ಲಿದ್ದ ರಾಜ್ಯದ ಜನತೆಗೆ ಮಳೆರಾಯ ಶಾಕ್ ನೀಡಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಭಾರೀ ಮಳೆಗೆ ಅವಾಂತರ ಸೃಷ್ಟಿಯಾಗಿವೆ.
BIGG NEWS: ಮನೆಗೆಲಸದಾಕೆಗೆ ಚಿತ್ರಹಿಂಸೆ ನೀಡಿ ಅಮಾನತುಗೊಂಡ BJP ನಾಯಕಿ ಅರೆಸ್ಟ್
ಬೆಂಗಳೂರು, ತುಮಕೂರು, ಮೈಸೂರು, ದಾವಣಗೆರೆ, ಚಿತ್ರದುರ್ಗ, ಕೋಲಾರ ಜಿಲ್ಲೆಗಳು ಸೇರಿದಂತೆ ಹಲವೆಡೆ ಮಳೆಗೆ ರಸ್ತೆಗಳು ಕರೆಯಂತಾಗಿವೆ. ಮಳೆ ನೀರು ಮನೆಗೆ ನುಗ್ಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಮನೆಗಳ ಕುಸಿತ, ಗ್ರಾಮಗಳು ಜಲಾವೃತ, ಬೆಳೆ ನಾಶ ಹೀಗೆ ವರುಣನ ಹೊಡೆತಕ್ಕೆ ಸಾಕಷ್ಟು ಅವಾಂತರಗಳಾಗಿವೆ.
ಬೆಂಗಳೂರಿನ ಮಾರತ್ಹಳ್ಳಿಯಲ್ಲಿ ರಾಜಕಾಲುವೆ ಮುಚ್ಚಿದ್ದಕ್ಕೆ ನಡುರಸ್ತೆಗೆ ಮಳೆ ನೀರು ನುಗ್ಗಿದೆ. ಮಾರತ್ಹಳ್ಳಿಯ ಇಕೋ ಸ್ಪೇಸ್ ಬಳಿಯ ಮುಖ್ಯರಸ್ತೆ ಜಲಾವೃತಗೊಂಡಿದೆ. ಕೈಗೊಂಡನಹಳ್ಳಿ, ಸರ್ಜಾಪುರ ಕೆರೆಗಳ ನೀರು ರಸ್ತೆಗೆ ರಭಸವಾಗಿ ಹರಿದು ಬರುತ್ತಿದೆ. ಮಾರತ್ಹಳ್ಳಿ-ಸರ್ಜಾಪುರ ಔಟರ್ ರಿಂಗ್ರೋಡ್ ಜಲಾವೃತವಾಗಿದೆ.
BIGG NEWS : ಗಣೇಶ ವಿಸರ್ಜನೆಗೆ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಮಾರ್ಗಸೂಚಿ ಪ್ರಕಟ : ಈ ನಿಯಮಗಳ ಪಾಲನೆ ಕಡ್ಡಾಯ
ದಾವಣಗೆರೆ ಜಿಲ್ಲೆಯಲ್ಲೂ ಮಳೆಯ ಅಬ್ಬರ ಮುಂದುವರೆದಿದ್ದು, ಜಗಳೂರಿನ ಪ್ರತಿಷ್ಠಿತ ಬಡಾವಣೆ ಜನಕ್ಕೆ ಗಣೇಶ ಹಬ್ಬದ ದಿನವೇ ಸಂಕಷ್ಟ ಎದುರಾಗಿದೆ. ಕೃಷ್ಣ ದೇವೇಗೌಡ ಹಾಗೂ ರಂಗನಾಥ ಬಡಾವಣೆಯ ನೂರಾರು ಮನೆಗಳಿಗೆ ನೀರು ನುಗ್ಗಿದೆ.
ಕೋಲಾರದಲ್ಲಿ ನಿರಂತರ ಮಳೆಯಿಂದ ಹಲವೆಡೆ ಅವಾಂತರಗಳಾಗಿವೆ. ಹೋಳೂರು ಗ್ರಾಮದ ಬಳಿ ಹತ್ತಾರು ಎಕರೆ ಜಮೀನು ಮುಳುಗಿದೆ. ಹೋಳೂರು-ಬೆಳ್ಳಂಬರಿ ಗ್ರಾಮಕ್ಕೆ ರಸ್ತೆ ಸಂಚಾರ ಬಂದ್ ಆಗಿದೆ.