ಕೆಎನ್ಎನ್ಡಿಜಿಟಲ್ ಡೆಸ್ಕ್ : ಭಾರತದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಐಸಿಸಿಯ ಇತ್ತೀಚಿನ ಟಿ20ಐ ರ್ಯಾಂಕಿಂಗ್ನಲ್ಲಿ ಸ್ಥಾನ ಪಡೆದಿದ್ದಾರೆ. ಆಲ್ ರೌಂಡರ್ʼಗಳ ಪಟ್ಟಿಯಲ್ಲಿ ಎಂಟು ಸ್ಥಾನ ಮೇಲೇರಿ ಐದನೇ ಸ್ಥಾನಕ್ಕೆ ತಲುಪಿದ್ದಾರೆ. ಆ ಮೂಲಕ, ಅವರ ವೃತ್ತಿಜೀವನದಲ್ಲಿ ಮೊದಲ ಬಾರಿಗೆ, ಅವರು ಈ ಮಟ್ಟಿಗೆ ಅತ್ಯುತ್ತಮ ಶ್ರೇಣಿಯನ್ನ ಸಾಧಿಸಿದ್ದಾರೆ. ಇದಕ್ಕೂ ಮುನ್ನ, ಪಾಕಿಸ್ತಾನ ವಿರುದ್ಧದ ಏಷ್ಯಾಕಪ್ 2022ರ ಆರಂಭಿಕ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಅದ್ಭುತ ಪ್ರದರ್ಶನ ನೀಡಿದ್ದರು.
ಅತ್ಯುತ್ತಮ ಆಟ.!
ಭಾನುವಾರ (ಆಗಸ್ಟ್ 28) ದುಬೈನಲ್ಲಿ ನಡೆದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಪಾಂಡ್ಯ ಬಾಲಿಂಗ್ ಮತ್ತು ಬ್ಯಾಟಿಂಗ್ ಎರಡರಿಂದಲೂ ಅತ್ಯುತ್ತಮ ಪ್ರದರ್ಶನ ಒರಿಸದರು. ಹಾರ್ದಿಕ್ ತಮ್ಮ ಬೌಲಿಂಗ್ ಕೋಟಾವನ್ನ 4 ಓವರ್ʼಗಳ ಪೂರ್ಣಗೊಳಿಸಿದರು. ಇನ್ನು 25 ರನ್ʼಗಳಿಗೆ ಮೂರು ವಿಕೆಟ್ ಪಡೆದರು. ಇನ್ನು ಬ್ಯಾಟಿಂಗ್ ವಿಷ್ಯಕ್ಕೆ ಬಂದಾಗ 17 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿ 22 ರನ್ ಗಳಿಸಿ ಅಜೇಯರಾಗಿ ಉಳಿದರು. ಇನ್ನು ಎರಡು ಎಸೆತಗಳು ಬಾಕಿ ಇರುವಂತೆಯೇ ಅವ್ರು ಸಿಕ್ಸರ್ ಬಾರಿಸಿ ಭಾರತ ಗೆಲ್ಲಿಸಿದ್ರು.
167 ರೇಟಿಂಗ್ ಅಂಕಗಳೊಂದಿಗೆ ಹಾರ್ದಿಕ್ ಪಾಂಡ್ಯ ಐಸಿಸಿ ಟಿ20ಐ ಆಲ್ರೌಂಡರ್ಗಳ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಏರಿದ್ದಾರೆ. ಇನ್ನು ಅಫ್ಘಾನಿಸ್ತಾನದ ನಾಯಕ ಮೊಹಮ್ಮದ್ ನಬಿ 257 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.
ಐಸಿಸಿ ಇತ್ತೀಚಿನ ಟಿ20ಐ ಆಲ್ರೌಂಡರ್ಗಳ ಪಟ್ಟಿ : ಟಾಪ್-5 ಇಲ್ಲಿದೆ.!
1. ಮೊಹಮ್ಮದ್ ನಬಿ- ಅಫ್ಘಾನಿಸ್ತಾನ (257)
2. ಶಕೀಬ್ ಅಲ್ ಹಸನ್- ಬಾಂಗ್ಲಾದೇಶ (245)
3. ಮೊಯೀನ್ ಅಲಿ- ಇಂಗ್ಲೆಂಡ್ (221)
4. ಗ್ಲೆನ್ ಮ್ಯಾಕ್ಸ್ವೆಲ್- ಆಸ್ಟ್ರೇಲಿಯಾ (183)
5. ಹಾರ್ದಿಕ್ ಪಾಂಡ್ಯ- ಭಾರತ (167)