ಪಾಟ್ನಾ: ಬಿಜೆಪಿಯನ್ನ ತೊರೆದು ತೇಜಸ್ವಿ ಯಾದವ್ ಮತ್ತು ಇತರ ವಿರೋಧ ಪಕ್ಷಗಳನ್ನ ಒಳಗೊಂಡ ಹೊಸ ‘ಮಹಾಮೈತ್ರಿಕೂಟ’ವನ್ನು ಘೋಷಿಸಿದ ನಂತ್ರ ನಿತೀಶ್ ಕುಮಾರ್ ನಾಳೆ ಸಂಜೆ 4 ಗಂಟೆಗೆ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
Bihar | JD(U)-RJD led 'Mahagathbandhan' (Grand Alliance) in Bihar to take oath at 4pm, tomorrow pic.twitter.com/OMQrcT0xYs
— ANI (@ANI) August 9, 2022
“ಏಳು ಪಕ್ಷಗಳ ಮಹಾಘಟಬಂಧನ್ (ಮಹಾ ಮೈತ್ರಿಕೂಟ), ಒಬ್ಬ ಪಕ್ಷೇತರರು ನಿಕಟವಾಗಿ ಕೆಲಸ ಮಾಡಲಿದ್ದಾರೆ” ಎಂದು ಇಂದು ರಾಜ್ಯಪಾಲರೊಂದಿಗಿನ ಎರಡನೇ ಸಭೆಯ ನಂತ್ರ ನಿತೀಶ್ ಕುಮಾರ್ ಹೇಳಿದರು.
ಅಂದ್ಹಾಗೆ, ನಿತೀಶ್ ತಮ್ಮ ಪಕ್ಷ, ಜನತಾದಳ ಯುನೈಟೆಡ್ ಅಥವಾ ಜೆಡಿಯು ಮತ್ತು ಬಿಜೆಪಿಯನ್ನ ಒಳಗೊಂಡ ಸರ್ಕಾರದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಒಂದು ಗಂಟೆಗೂ ಕಡಿಮೆ ಅವಧಿಯಲ್ಲಿ ರಾಜ್ಯಪಾಲರ ಬಳಿಗೆ ಹಿಂದಿರುಗಿದರು. ತೇಜಸ್ವಿ ಯಾದವ್ ಮತ್ತು ಇತರ ವಿರೋಧ ಪಕ್ಷದ ನಾಯಕರೊಂದಿಗೆ, ತಮ್ಮ ಒಟ್ಟು ಬಲದ ಆಧಾರದ ಮೇಲೆ ಮುಂದಿನ ಸರ್ಕಾರವನ್ನ ರಚಿಸಲಾಗುವುದು ಎಂದು ಹೇಳಿದರು.