ಬೆಂಗಳೂರು : ರಾಜ್ಯ ಸರ್ಕಾರ ರೈತರಿಗೆ ಗುಡ್ ನ್ಯೂಸ್ ನೀಡಿದ್ದು, ಶ್ರೀಗಂಧ ನೀತಿ-2022ಕ್ಕೆ ಸಚಿವ ಸಂಪುಟ ಸಭೆ ಸಮ್ಮತಿ ನೀಡಿದೆ. ಈ ಮೂಲಕ ರೈತರು ತಮ್ಮ ಖಾಸಗಿ ಜಮೀನಿನಲ್ಲಿ ಶ್ರೀಗಂಧ ಬೆಳೆಯಲು ಅವಕಾಶ ಸಿಕ್ಕಂತಾಗಿದೆ.
ಸಚಿವ ಸಂಪುಟ ಸಭೆ ನಂತ್ರ ಸಚಿವ ಸುಧಾಕರ್ ಮಾಹಿತಿ ನೀಡಿದ್ದು, ಶ್ರೀಗಂಧ ನೀತಿ-2022ಕ್ಕೆ ಸಚಿವ ಸಂಪುಟ ಸಭೆ ಸಮ್ಮತಿ ನೀಡಿದೆ. ಈ ಮೂಲಕ ರೈತರು ತಮ್ಮ ಖಾಸಗಿ ಜಮೀನಿನಲ್ಲಿ ಶ್ರೀಗಂಧ ಬೆಳೆಯಬಹುದು” ಎಂದರು.
ಇನ್ನು “ರೈತರು ತಮ್ಮ ಜಮೀನಿನಲ್ಲಿ ಶ್ರೀಗಂಧವನ್ನ ಬೆಳೆದು, ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದು. ಇನ್ನು ಜಾಗತಿಕ ಮಟ್ಟದಲ್ಲಿ ಶ್ರೀಗಂಧಕ್ಕೆ ಹೆಚ್ಚಿನ ಬೇಡಿಕೆ ಇದೆ. ಹೀಗಾಗಿ ಶ್ರೀಗಂಧ ನೀತಿ ಸರಳೀಕರಣ ಮಾಡಿದ್ದೇವೆ. ಶ್ರೀಗಂಧ ಬೆಳೆಯುವ ರೈತರಿಗೆ ಮಾರ್ಗದರ್ಶನ ನೀಡಲಿದ್ದೇವೆ. ರೈತರು ಬೆಳೆಯುವ ಶ್ರೀಗಂಧಕ್ಕೆ ರಕ್ಷಣೆ ಒದಗಿಸುತ್ತೇವೆ” ಎಂದು ಸಚಿವರು ತಿಳಿಸಿದರು.
BREAKING NEWS: ‘ಚಳಿಗಾಲದ ಅಧಿವೇಶನ’ಕ್ಕೆ ಮಹೂರ್ತ ಫಿಕ್ಸ್: ‘ಬೆಳಗಾವಿಯ ಸುವರ್ಣಸೌಧ’ದಲ್ಲಿ ಡಿ.19ರಿಂದ ಆರಂಭ