ಬೆಂಗಳೂರು : ಶಿಕ್ಷಕ ಹುದ್ದೆಯ ಆಕಾಂಕ್ಷಿಗಳಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಶಿಕ್ಷಕರ ನೇಮಕಾತಿ ಹೊಸ ನಿಯಮಾವಳಿಗಳಿಗೆ ಅನುಮೋದನೆ ನೀಡಿದೆ. ಈ ಮೂಲಕ ಶಿಕ್ಷಕರ ನೇಮಕಾತಿಯಲ್ಲಿ ವಯೋಮಿತಿ ಸಡಿಲಿಕೆ ಸಿಕ್ಕಿದೆ.
ಈ ಹೊಸ ನಿಯಮಾವಳಿಗಳಿಗೆ ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದ್ದು, ಶಿಕ್ಷಕರ ನೇಮಕಾತಿಯಲ್ಲಿ ವಯೋಮಿತಿ ಸಡಿಲಿಕೆ ನಿರ್ಧರಿಸಲಾಗಿದೆ. ಅದ್ರಂತೆ, ಎಲ್ಲ ವರ್ಗಗಳಿಗೂ ವಯೋಮಿತಿಯಲ್ಲಿ 2 ವರ್ಷ ಏರಿಕೆಗೆ ನಿರ್ಧಾರ ಮಾಡಲಾಗಿದ್ದು, ಹೊಸ ನಿಯಮದನ್ವಯ ಎಸ್,ಎಸ್ಟಿ, ಪ್ರವರ್ಗ 1, ವಿಕಲಚೇತನರಿಗೆ 47 ವರ್ಷ ಮೀರಿರಬಾರದು. ಇನ್ನು ಪ್ರವರ್ಗ 2, 2ಬಿ, 3ಎ ಮತ್ತು 3ಬಿಗೆ 45 ವರ್ಷ ಮೀರಿರಬಾರದು. ಅದ್ರಂತೆ, ಸಾಮಾನ್ಯ ವರ್ಗಗಳಿಗೆ 42 ವರ್ಷ ಮೀರಿರಬಾರದು.
ಇನ್ನು ಶಿಕ್ಷಕರ ಹುದ್ದೆಗೆ ಆಯ್ಕೆಯಾಗಲು ಇದ್ದ ಕನಿಷ್ಠ ಅಂಕಗಳಲ್ಲೂ ಇಳಿಕೆ ಮಾಡಲಾಗಿದ್ದು, ಕಟಾಫ್ ಅಂಕಗಳು 60ರಿಂದ 50ಕ್ಕೆ ಸರ್ಕಾರ ಇಳಿಸಿದೆ.