ಬೆಂಗಳೂರು : ಕಾಶಿಯಾತ್ರೆ ಸಹಾಯಧನ ಯೋಜನೆಯಡಿ ರಾಜ್ಯದಿಂದ ಕಾಶಿ ಯಾತ್ರೆಗೆ ತೆರಳುವ ಯಾತ್ರಿಕರಿಗೆ 5 ಸಾವಿರ ನೀಡುವುದಾಗಿ ಈಗಾಗ್ಲೇ ರಾಜ್ಯ ಸರ್ಕಾರ ಘೋಷಿಸಿದೆ. ಸಧ್ಯ ಯಾತ್ರೀಕರ ಖಾತೆಗೆ ನೇರವಾಗಿ 5 ಸಾವಿರ ಸಹಾಯಧನ ಸೇರಲಿದೆ. ಹೌದು, ಯಾತ್ರೀಕರ ಖಾತೆಗೆ ನೇರವಾಗಿ ನಗದು ವರ್ಗಾವಣೆಯಾಗುವ ಕಾರ್ಯಕ್ರಮಕ್ಕೆ ಸಧ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಿಎಂ ಬೊಮ್ಮಾಯಿ ಈ ಕಾರ್ಯಕ್ರಮಕ್ಕೆ ಚಾಲನೆ ಸಿಎಂ ಚಾಲನೆ ನೀಡಿದ್ದು, ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವವರಿಗೆ 5 ಸಾವಿರ ರೂಪಾಯಿ ನೇರ ನಗದು ವರ್ಗಾವಣೆಯಾಲಿದೆ. ಇನ್ನು ಈ ವೇಳೆ ಮುಖರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಉಪಸ್ಥಿತರಿದ್ದರು.
ನಂತ್ರ ಮಾತನಾಡಿದ ಸಿಎಂ ಬೊಮ್ಮಾಯಿ, ಕಾಶಿ ಯಾತ್ರಿಕರಿಗೆ ಸಹಾಯ ಮಾಡಬೇಕೆಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಹೊಸ ಕಾರ್ಯಕ್ರಮ ರೂಪಿಸಿದ್ದಾರೆ. ಕಾಶಿ ಯಾತ್ರೆ ತೆರಳುವವರ ಖಾತೆಗೆ ನೇರವಾಗಿ ನಗದು ವರ್ಗಾವಣೆಯಾಗಲಿದೆ. ಸಚಿವೆ ಜೊಲ್ಲೆ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದರು.