ಅಲಿಗಢ/ಉತ್ತರ ಪ್ರದೇಶ ; ಮಾಂಸದ ಕಾರ್ಖಾನೆಯಿಂದ ಅಮೋನಿಯಾ ಅನಿಲ ಸೋರಿಕೆಯಿಂದ ಮಹಿಳೆಯೊಬ್ಬರು ಮೃತಪಟ್ಟು, ಸುಮಾರು 65 ಜನರು ಅಸ್ವಸ್ಥಗೊಂಡ ಘಟನೆ ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯ ಮಾಂಸ ಕಾರ್ಖಾನೆಯಲ್ಲಿ ಗುರುವಾರ ನಡೆದಿದೆ. ಹಾಜಿ ಜಹೀರ್ ಒಡೆತನದ ಅಲ್-ದುವಾ ಮಾಂಸದ ಕಾರ್ಖಾನೆಯಲ್ಲಿ ಈ ಘಟನೆ ನಡೆದಿದೆ.
ಎಲ್ಲಾ ಅಸ್ವತ್ಥರನ್ನ ಜೆಎನ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದ್ದು, ಅನಿಲ ಸೋರಿಕೆಗೆ ಕಾರಣಗಳನ್ನ ಕಂಡುಹಿಡಿಯಲಾಗುತ್ತಿದೆ.
“ಅನಿಲ ಸೋರಿಕೆಯ ನಂತ್ರ ಕಾರ್ಖಾನೆಯನ್ನ ತಕ್ಷಣವೇ ಸ್ಥಳಾಂತರಿಸಲಾಯಿತು ಮತ್ತು ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳಿದೆ. ಪೀಡಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ” ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
पुलिस एवं प्रशासनिक अधिकारियों द्वारा राहत कार्य प्रचलित है, उपरोक्त सम्बन्ध में जिलाधिकारी अलीगढ़ की बाइट pic.twitter.com/zMbS7dpRkn
— ALIGARH POLICE (@aligarhpolice) September 29, 2022