ಕೆಎನ್ಎನ್ಡಿಜಿಟಲ್ ಡೆಸ್ಕ್ : ವಾರಣಾಸಿಯಿಂದ ಮುಂಬೈಗೆ ಬಂದಿದ್ದ ವಿಸ್ತಾರಾ ಏರ್ಲೈನ್ಸ್ನ ಯುಕೆ 622 ವಿಮಾನವು ಹಕ್ಕಿಯ ಹೊಡೆತದಿಂದಾಗಿ ತುರ್ತು ಭೂಸ್ಪರ್ಶ ಮಾಡಿದೆ. ಆದ್ರೆ, ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಾರಣಾಸಿಯಿಂದ ಮುಂಬೈಗೆ ತೆರಳುವ ವಿಸ್ತಾರಾ ಏರ್ಲೈನ್ಸ್ನ UK 622 ವಿಮಾನವು ಟೇಕ್ ಆಫ್ ಆಗಲು ಹೊರಟಿದ್ದಾಗ ಹಕ್ಕಿಯೊಂದು ಡಿಕ್ಕಿ ಹೊಡೆದಿದ್ದು, ತುರ್ತು ಭೂಸ್ಪರ್ಶ ಮಾಡಿದೆ. ನಂತ್ರ ವಿಮಾನವನ್ನು ರನ್ವೇಯಲ್ಲಿ ನಿಲ್ಲಿಸಲಾಯಿತು.
ಎಂಜಿನಿಯರ್ಗಳು ವಿಮಾನದ ತಾಂತ್ರಿಕ ತಪಾಸಣೆಯನ್ನ ನಡೆಸುತ್ತಿದ್ದು, ವಿಮಾನದಲ್ಲಿದ್ದ ಪ್ರಯಾಣಿಕರ ಸಂಖ್ಯೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.