ಪಾಟ್ನಾ: ದೇಶದ ಹಲವು ರಾಜ್ಯಗಳಲ್ಲಿ ಪಾಂಕಿಪಾಕ್ಸ್ʼಗೆ ತುತ್ತಾಗುತ್ತಿರುವ ಬೆನ್ನಲ್ಲೇ ಬಿಹಾರದಲ್ಲೂ ಶಂಕಿತ ಪಾಂಕಿಪಾಕ್ಸ್ ಕೇಸ್ ಪತ್ತೆಯಾಗಿದೆ. ಮಂಗನ ಕಾಯಿಲೆಯ ಲಕ್ಷಣಗಳನ್ನ ಹೊಂದಿರುವ ಮಹಿಳೆ ಪಾಟ್ನಾ ನಗರದ ನಿವಾಸಿಯಾಗಿದ್ದು, PMCHನ ಮೈಕ್ರೋ ವೈರಾಲಜಿ ವಿಭಾಗದ ತಂಡವು ಮಾದರಿಯನ್ನ ತೆಗೆದುಕೊಂಡು ಪರೀಕ್ಷೆಗಾಗಿ ಪುಣೆಗೆ ಕಳುಹಿಸುತ್ತಿದೆ. ಬಿಹಾರ ಆರೋಗ್ಯ ಇಲಾಖೆ ಈ ವಿಷಯವನ್ನ ಅನುಮಾನಾಸ್ಪದವಾಗಿ ಪರಿಗಣಿಸಿದ್ದು, ಆರೋಗ್ಯ ಸಚಿವ ಮಂಗಲ್ ಪಾಂಡೆ ಕೂಡ ಈ ಕುರಿತು ಸಭೆ ನಡೆಸಿದ್ದಾರೆ.
ಇಂದು ನಡೆದ ಸಭೆಯಲ್ಲಿ, ಬಿಹಾರ ಆರೋಗ್ಯ ಸಚಿವಾಲಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಎಲ್ಲಾ ಹಿರಿಯ ಅಧಿಕಾರಿಗಳು, ರಾಜ್ಯದ ಎಲ್ಲಾ ಜಿಲ್ಲೆಗಳ ಸಿವಿಲ್ ಸರ್ಜನ್ಗಳು, ಎಲ್ಲಾ ವೈದ್ಯಕೀಯ ಕಾಲೇಜುಗಳ ಅಧೀಕ್ಷಕರು ಭಾಗವಹಿಸಿದ್ದರು. ಮಂಗನ ಕಾಯಿಲೆಗೆ ಸಂಬಂಧಿಸಿದಂತೆ WHO ಮತ್ತು ಭಾರತ ಸರ್ಕಾರ ನೀಡಿದ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ಈ ಕಾಯಿಲೆ ಏನು? ರೋಗಲಕ್ಷಣಗಳು ಯಾವುವು? ಅದು ಹೇಗೆ ಸರಿಯಾಗುತ್ತದೆ? ಏನು ಪರಿಶೀಲಿಸಬೇಕು? ಈ ಎಲ್ಲಾ ವಿಷಯಗಳನ್ನು ಚರ್ಚಿಸಲಾಗಿದೆ.