ಚೀನಾ ; ಈಶಾನ್ಯ ಚೀನಾದಲ್ಲಿ ರೆಸ್ಟೋರೆಂಟ್’ವೊಂದರಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, ಬೆಂಕಿ ತಗುಲಿ ಕನಿಷ್ಠ 17 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು ಅಧಿಕಾರಿಗಳನ್ನ ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎಫ್ ಪಿ ವರದಿ ಮಾಡಿದ್ದು, “ಈಶಾನ್ಯ ಚೀನಾದಲ್ಲಿ ರೆಸ್ಟೋರೆಂಟ್’ವೊಂದರಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, ಬೆಂಕಿ ತಗುಲಿ ಕನಿಷ್ಠ 17 ಜನರು ಸಾವನ್ನಪ್ಪಿದ್ದಾರೆ” ಎಂದಿದೆ.
ಚೀನಾದ ಜಿಲಿನ್ ಪ್ರಾಂತ್ಯದ ಚಾಂಗ್ಚುನ್ ನಗರದ ರೆಸ್ಟೋರೆಂಟ್ನಲ್ಲಿ ಬುಧವಾರ ಬೆಂಕಿ ಕಾಣಿಸಿಕೊಂಡಿದ್ದು, 17 ಜನರು ಸಾವನ್ನಪ್ಪಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ. ಬೆಂಕಿಯನ್ನು ಹತೋಟಿಗೆ ತರಲಾಗಿದೆ. ಬೆಂಕಿ ನಂದಿಸಲು ಹಲವು ಅಗ್ನಿಶಾಮಕ ಟೆಂಡರ್ಗಳನ್ನು ಸ್ಥಳಕ್ಕೆ ಕರೆಸಲಾಗಿದ್ದು, ಸಾಕಷ್ಟು ಪ್ರಯತ್ನ ಪಡಬೇಕಾಯಿತು. ಇನ್ನು ಸದ್ಯ ಬೆಂಕಿ ಅನಾಹುತಕ್ಕೆ ಕಾರಣವನ್ನ ಪತ್ತೆ ಮಾಡಲಾಗುತ್ತಿದೆ.