ನವದೆಹಲಿ : ಎರಡು ದಿನಗಳ ನಂತರ ಕತಾರ್’ನಲ್ಲಿ ಫುಟ್ಬಾಲ್ ಉತ್ಸವ 22ನೇ ವಿಶ್ವಕಪ್ ಭಾನುವಾರ (ನವೆಂಬರ್ 18) ಆರಂಭವಾಗಲಿದೆ. ಇದರ ಉದ್ಘಾಟನಾ ಸಮಾರಂಭದಲ್ಲಿ ಉಪರಾಷ್ಟ್ರಪತಿ ಜಗದೀಪ್ ಧಂಕರ್ ಭಾರತವನ್ನ ಪ್ರತಿನಿಧಿಸಲಿದ್ದಾರೆ. ಹೀಗಾಗಿ ಅವ್ರು ನವೆಂಬರ್ 20 ಮತ್ತು 21ರಂದು ಎರಡು ದಿನಗಳ ಭೇಟಿಗಾಗಿ ಕತಾರ್’ಗೆ ತೆರಳಲಿದ್ದಾರೆ.
Vice President Jagdeep Dhankhar will pay an official visit to Qatar on 20-21 November and represent India at the inauguration of the FIFA World Cup 2022.
(File pic) pic.twitter.com/JPKgTklEUo
— ANI (@ANI) November 18, 2022
ಒಂದು ತಿಂಗಳ ಕಾಲ ನಡೆಯಲಿರುವ ಪಂದ್ಯಾವಳಿಯಲ್ಲಿ ಸುಮಾರು 32 ತಂಡಗಳು ಭಾಗವಹಿಸಲಿವೆ. ಇದೇ ಮೊದಲ ಬಾರಿಗೆ ನವೆಂಬರ್-ಡಿಸೆಂಬರ್ ತಿಂಗಳಲ್ಲಿ ವಿಶ್ವಕಪ್ ನಡೆಯಲಿದೆ. ಇಲ್ಲಿಯವರೆಗೆ, ವಿಶ್ವಕಪ್ ಜೂನ್-ಜುಲೈನಲ್ಲಿ ನಡೆಯುತ್ತಿತ್ತು. ಪಂದ್ಯಾವಳಿಯ ಮೊದಲ ಪಂದ್ಯವು ಅಲ್ ಬಯಾತ್ ಕ್ರೀಡಾಂಗಣದಲ್ಲಿ 60 ಸಾವಿರ ಪ್ರೇಕ್ಷಕರ ಸಾಮರ್ಥ್ಯದೊಂದಿಗೆ ನಡೆಯಲಿದೆ. ಪಂದ್ಯಾವಳಿಯ ಪಂದ್ಯಗಳು ಎಂಟು ಮೈದಾನಗಳಲ್ಲಿ ನಡೆಯಲಿವೆ. 80,000 ಸಾಮರ್ಥ್ಯದ ಲುಸೈಲ್ ಕ್ರೀಡಾಂಗಣದಲ್ಲಿ ಅಂತಿಮ ಪಂದ್ಯ ನಡೆಯಲಿದೆ. ಇದು ಮಧ್ಯಪ್ರಾಚ್ಯದಲ್ಲಿ ನಡೆಯಲಿರುವ ಮೊದಲ ವಿಶ್ವಕಪ್ ಆಗಿದೆ.
BREAKING NEWS : ಜಮ್ಮು- ಕಾಶ್ಮೀರದ ಕುಪ್ವಾರಾದಲ್ಲಿ ಭಾರೀ ಹಿಮಪಾತ ; ಮೂವರು ಸೈನಿಕರು ಸಾವು
‘ಪಂಚರತ್ನ’ ಸಮಾವೇಶ ಮುಗಿಸಿ ‘ಗ್ರಾಮ ವಾಸ್ತವ್ಯ’ಕ್ಕೆ ತೆರಳಿದ ಹೆಚ್.ಡಿ ಕುಮಾರಸ್ವಾಮಿ |H.D Kumaraswamy