ಕಿಶ್ತ್ವಾರ್ : ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಪ್ರದೇಶದಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಪ್ರಪಾತಕ್ಕೆ ಕಾರು ಬಿದ್ದ ಪರಿಣಾಮ ಎಂಟು ಜನರು ಸಾವನ್ನಪ್ಪಿದ್ದಾರೆ. ಈ ಮಾಹಿತಿಯನ್ನು ಕಿಶ್ತ್ವಾರ್ ನ ಡೆಪ್ಯುಟಿ ಕಮಿಷನರ್ ನೀಡಿದ್ದು, ಮೃತರಲ್ಲಿ ನಾಲ್ವರು ಮಹಿಳೆಯರು ಮತ್ತು ಒಬ್ಬ ಚಾಲಕ ಸೇರಿದ್ದಾರೆ. ಕಿಶ್ತ್ವಾರ್’ನ ಮಾರ್ವಾ ಪ್ರದೇಶದಲ್ಲಿ ಸಂಜೆ 5.30ರ ಸುಮಾರಿಗೆ ಈ ಘಟನೆ ನಡೆದಿದೆ.
ಘಟನೆಯ ವಿವರಗಳನ್ನುನೀಡಿದ ಕಿಶ್ತ್ವಾರ್ ಜಿಲ್ಲಾಧಿಕಾರಿ ದೇವಾಂಶ್ ಯಾದವ್, ಜಮ್ಮು ವಿಭಾಗದ ಕಿಶ್ತ್ವಾರ್ನ ಮಾರ್ವಾ ಪ್ರದೇಶದಲ್ಲಿ ಟಾಟಾ ಸುಮೋ ಕಾರು ಪ್ರಪಾತಕ್ಕೆ ಬಿದ್ದಿದೆ ಎಂದು ಹೇಳಿದರು. ಕಾರಿನಲ್ಲಿದ್ದ 8 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನ ಮಾರ್ವಾ ನಿವಾಸಿಗಳು ಎಂದು ಗುರುತಿಸಲಾಗಿದೆಯಾದ್ರೂ ಇನ್ನೂ ಖಚಿತವಾಗಿಲ್ಲ.
J&K | Eight people died when a car fell into a deep gorge around 5:30 in the evening in the Marwah area of Kishtwar: Deputy Commissioner Kishtwar
— ANI (@ANI) November 16, 2022
ಶಿವಮೊಗ್ಗ: ನ.18, 19ರಂದು ಜಿಲ್ಲೆ ಈ ಪ್ರದೇಶಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ | Water Supply
SHOCKING NEWS : ‘ಮತಾಂತರ’ವಾಗಲು ಒಪ್ಪದ ಪ್ರೇಯಸಿಯನ್ನ 4ನೇ ಮಹಡಿಯಿಂದ ತಳ್ಳಿ ಕೊಂದ ಪ್ರಿಯಕರ