ನವದೆಹಲಿ : ಕಾಂಗ್ರೆಸ್ ಪಕ್ಷದ ಯೂಟ್ಯೂಬ್ ಚಾನೆಲ್ ಡಿಲೀಟ್ ಮಾಡಲಾಗಿದ್ದು, ಈ ಮಾಹಿತಿಯನ್ನ ಪಕ್ಷ ನೀಡಿದೆ. ಇನ್ನು ಈ ಚಾನಲ್ ಯಾಕೆ ಅಳಿಸಲಾಗಿದೆ ಎಂದು ತನಿಖೆ ನಡೆಸಲಾಗುತ್ತಿದೆ ಎಂದಿದೆ. ಸದ್ಯಕ್ಕೆ, ಕಾಂಗ್ರೆಸ್ ಯುಟ್ಯೂಬ್ ಮತ್ತು ಗೂಗಲ್ ಎರಡನ್ನೂ ಸಂಪರ್ಕಿಸಿದ್ದು, ತನ್ನ ಚಾನೆಲ್ ಪುನಃಸ್ಥಾಪಿಸುವಂತೆ ಕೇಳಿದೆ.
ನಮ್ಮ ಯೂಟ್ಯೂಬ್ ಚಾನೆಲ್ ‘ಇಂಡಿಯನ್ ನ್ಯಾಷನಲ್ ಕಾಂಗ್ರೆಸ್’ ಅನ್ನು ಅಳಿಸಲಾಗಿದೆ ಎಂದು ಪಕ್ಷವು ಹೇಳಿಕೆಯಲ್ಲಿ ತಿಳಿಸಿದೆ. “ನಾವು ಅದನ್ನ ಸರಿಪಡಿಸಲು ಪ್ರಯತ್ನಿಸುತ್ತಿದ್ದೇವೆ, ಯೂಟ್ಯೂಬ್ ಮತ್ತು ಗೂಗಲ್ ತಂಡದೊಂದಿಗೆ ಮಾತುಕತೆ ನಡೆಯುತ್ತಿದೆ. ಇದು ತಾಂತ್ರಿಕ ದೋಷವೋ ಅಥವಾ ಪಿತೂರಿಯೋ ಎಂದು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿರುವ ತನಿಖೆ ನಡೆಯುತ್ತಿದೆ. ನಾವು ಶೀಘ್ರದಲ್ಲೇ ಹಿಂತಿರುಗುತ್ತೇವೆ ಎಂದು ಆಶಿಸುತ್ತೇವೆ” ಎಂದಿದೆ.