ಸೂರತ್: ಗುಜರಾತ್ನ ಸೂರತ್ನಲ್ಲಿ ಗುರುವಾರ ರಿಕ್ಟರ್ ಮಾಪಕದಲ್ಲಿ 3.5 ತೀವ್ರತೆಯ ಭೂಕಂಪನದ ಅನುಭವವಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್ಸಿಎಸ್) ತಿಳಿಸಿದೆ. ಸೂರತ್ನಿಂದ ಆಗ್ನೇಯಕ್ಕೆ 61 ಕಿಲೋಮೀಟರ್ ದೂರದಲ್ಲಿ ಬೆಳಿಗ್ಗೆ 10.26 ರ ಸುಮಾರಿಗೆ ಭೂಮಿಯ ಮೇಲ್ಮೈ ಅಡಿಯಲ್ಲಿ ಟೆಕ್ಟೋನಿಕ್ ಪ್ಲೇಟ್ಗಳ ಚಲನೆಯನ್ನು ಅನುಭವಿಸಲಾಯಿತು ಎಂದು ಎನ್ಸಿಎಸ್ ತಿಳಿಸಿದೆ. ಇದಕ್ಕೂ ಮುನ್ನ ಅಕ್ಟೋಬರ್ 14 ರಂದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಬಳಿ 4.3 ತೀವ್ರತೆಯ ಭೂಕಂಪ ಸಂಭವಿಸಿದ್ದರೆ, ಛತ್ತೀಸ್ಗಢದ ಅಂಬಿಕಾಪುರದಲ್ಲಿ ಅದೇ ದಿನ 4.8 ತೀವ್ರತೆಯ ಭೂಕಂಪ ಸಂಭವಿಸಿತ್ತು.
Earthquake of Magnitude:3.5, Occurred on 20-10-2022, 10:26:23 IST, Lat: 20.71 & Long: 73.16, Depth: 7 Km ,Location: 61km SE of Surat, Gujarat, India for more information Download the BhooKamp App https://t.co/DN7ioCa7qE@Indiametdept @ndmaindia pic.twitter.com/dSIUuuy71K
— National Center for Seismology (@NCS_Earthquake) October 20, 2022
ವಿಶೇಷವೆಂದರೆ, ಪ್ರಧಾನಿ ನರೇಂದ್ರ ಮೋದಿ ಕೂಡ ತಮ್ಮ ಊರಿನಲ್ಲಿದ್ದಾರೆ ಮತ್ತು ಇಂದು ಕೆವಾಡಿಯಾದಲ್ಲಿ ಮಿಷನ್ ಲಿಫ್ಇಗೆ ಚಾಲನೆ ನೀಡಲಿದ್ದಾರೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರನ್ನು ಗುಜರಾತ್ ನ ಕೆವಾಡಿಯಾದಲ್ಲಿರುವ ಏಕತಾ ಪ್ರತಿಮೆಯಲ್ಲಿ ಭೇಟಿಯಾದರು ಎನ್ನಲಾಗಿದೆ.