ನವದೆಹಲಿ : ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ ನಡೆಯುತ್ತಿರುವುದರಿಂದ ಭಾರತವು ಇಂದು ತನ್ನ 15ನೇ ಅಧ್ಯಕ್ಷರನ್ನ ಪಡೆಯಲು ಸಜ್ಜಾಗಿದೆ. ಬಿಜೆಪಿ ನೇತೃತ್ವದ ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಮತ್ತು ವಿರೋಧ ಪಕ್ಷದ ಜಂಟಿ ಅಭ್ಯರ್ಥಿ ಯಶವಂತ್ ಸಿನ್ಹಾ ನಡುವೆ ಸ್ಪರ್ಧೆ ಏರ್ಪಟ್ಟಿದ್ದು, ದ್ರೌಪದಿ ಮುರ್ಮ ಎರಡನೇ ಸುತ್ತಿನ ಮತ ಎಣಿಕೆಯಲ್ಲೂ ಭಾರಿ ಮುನ್ನಡೆ ಸಾಧಿಸಿದ್ದಾರೆ.
ಇನ್ನು ಸಂಸತ್ತಿನ ಹಿಂದಿನ ಫಲಿತಾಂಶಗಳನ್ನ ಸೇರಿಸಿದ್ರೆ, ಇಲ್ಲಿಯವರೆಗೆ ಒಟ್ಟು 1,886 ಮಾನ್ಯ ಮತಗಳು 6,73,175 ಆಗಿದ್ದು, ಅದರಲ್ಲಿ ದ್ರೌಪದಿ ಮುರ್ಮು 4,83,299 ಮೌಲ್ಯದ 1,349 ಮತಗಳನ್ನು ಪಡೆದಿದ್ದಾರೆ. ಯಶವಂತ್ ಸಿನ್ಹಾ ಅವರು 537 ಮತಗಳನ್ನು ಪಡೆದಿದ್ದು, ಅದರ ಮೌಲ್ಯ 1,89,876 ಆಗಿದೆ ಎಂದು ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿ ಪಿಸಿ ಮೋದಿ ಹೇಳಿದ್ದಾರೆ.