ಪಾಟ್ನಾ : ಪಾಟ್ನಾದ ಮನೇರ್ನ ರಾಂಪುರ್ ಪಾಟಿಲಾ ಘಾಟ್ ಬಳಿಯಿದ್ದ ದೋಣಿಯಲ್ಲಿ ಸಿಲಿಂಡರ್ ಸ್ಫೋಟಗೊಂಡಿದ್ದು, ಅಡುಗೆ ಮಾಡುತ್ತಿದ್ದ ನಾಲ್ವರು ಕಾರ್ಮಿಕರು ಸಜೀವ ದಹನವಾಗಿದ್ದಾರೆ ಮತ್ತು ಘಟನೆಯಲ್ಲಿ ಡಜನ್ ಗಟ್ಟಲೆ ಜನರು ಗಾಯಗೊಂಡಿದ್ದಾರೆ. ಮೃತರಲ್ಲಿ ರಂಜನ್ ಪಾಸ್ವಾನ್, ದಶರಥ್ ಪಾಸ್ವಾನ್, ಕನ್ಹಾಯ್ ಬಿಂದ್ ಜೊತೆಗೆ ದೋಣಿಯ ಮಾಲೀಕ ಓಂ ಪ್ರಕಾಶ್ ರೈ ಸೇರಿದ್ದಾರೆ. ಅವರೆಲ್ಲರೂ ಸುಟ್ಟು ಕರಕಲಾದರು. ಹಲ್ದಿ ಚಾಪರ್ ಮನೇರ್ ನಿವಾಸಿಗಳಾದ ರಂಜನ್ ಪಾಸ್ವಾನ್, ದಶರಥ್ ಪಾಸ್ವಾನ್ ಮತ್ತು ಓಂ ಪ್ರಕಾಶ್ ರೈ ಮೃತಪಟ್ಟವರಲ್ಲಿ ಸೇರಿದ್ದಾರೆ. ಸಾವಿನ ಸುದ್ದಿಯ ನಂತರ, ಸ್ಥಳೀಯ ಮನೇರ್ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ತಲುಪಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ದೋಣಿಯಲ್ಲಿ ಸುಮಾರು 20 ಕಾರ್ಮಿಕರು ಅಕ್ರಮ ಮರಳು ಸಾಗಿಸುತ್ತಿದ್ದರು ಎಂದು ಹೇಳಲಾಗುತ್ತದೆ, ಅವರಲ್ಲಿ ನಾಲ್ವರು ಅಡುಗೆ ಮಾಡುತ್ತಿದ್ದರು. ಆ ಸಮಯದಲ್ಲಿ, ಅನಿಲ ಸೋರಿಕೆಯಾಗಿದ್ದು,ನಂತ್ರ ಸ್ಪೋಟಗೊಂಡಿದೆ. ಅಡುಗೆ ಮಾಡುತ್ತಿದ್ದ ಜಾಗದಲ್ಲಿಯೇ ದೋಣಿಯ ಯಂತ್ರಕ್ಕಾಗಿ ಡೀಸೆಲ್ ಕೂಡ ಇರಿಸಲಾಗಿತ್ತು, ಅದು ಸಹ ತೀವ್ರ ಮಟ್ಟದಲ್ಲಿ ಬೆಂಕಿ ಹೊತ್ತಿ ಉರಿಯಲು ಕಾರಣವಾಗಿದೆ. ಅದ್ರಂತೆ, ದೋಣಿಯ ಬದಿಯಲ್ಲಿ ಸಿಕ್ಕಿಹಾಕಿಕೊಂಡ ನಂತರ ನಾಲ್ಕು ಜನರು ಸುಟ್ಟು ಕರಕಲಾಗಿದ್ದು, ಅವರೆಲ್ಲರೂ ಸಾವನ್ನಪ್ಪಿದ್ದಾರೆ. ಡಜನ್ಗಟ್ಟಲೇ ಕಾರ್ಮಿಕರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.