ನವದೆಹಲಿ : ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಸ್ಫೋಟ ನಡೆಸಲು ಯೋಜಿಸಿದ್ದ ಐಸಿಸ್ ಸಂಪರ್ಕಿತ ಭಯೋತ್ಪಾದಕನನ್ನ ಯುಪಿ ಎಟಿಎಸ್ ತಂಡವು ಅಜಂಗಢದಲ್ಲಿ ಬಂಧಿಸಿದೆ. ಭಯೋತ್ಪಾದಕನನ್ನ ಸಬುದ್ದೀನ್ ಅಜ್ಮಿ ಎಂದು ಗುರುತಿಸಲಾಗಿದೆ.
ಸಬುದ್ದೀನ್ ಪ್ರಸ್ತುತ ಓವೈಸಿ ಅವ್ರ ಪಕ್ಷ ಐಐಎಂನ ಸಕ್ರಿಯ ಸದಸ್ಯರಾಗಿದ್ದು, ಎಟಿಎಸ್ ತಂಡವು ಸಬಾವುದ್ದೀನ್ʼನನ್ನ ಪ್ರಧಾನ ಕಚೇರಿಗೆ ಕರೆತಂದು ವಿಚಾರಣೆ ನಡೆಸುತ್ತಿದೆ.
ಭಯೋತ್ಪಾದಕ ಸಬಾವುದ್ದೀನ್ ಮತ್ತು ಜಿಹಾದ್ಗೆ ಸಂಬಂಧಿಸಿದಂತೆ ಯುವಕರನ್ನ ಬ್ರೈನ್ ವಾಶ್ ಮಾಡಲು ಐಸಿಸ್ ರಚಿಸಿದ ಟೆಲಿಗ್ರಾಮ್ ಚಾನೆಲ್ ಅಲ್ ಸ್ವೈರ್ ಮೀಡಿಯಾದೊಂದಿಗೆ ನಂಟು ಹೊಂದಿರುವುದು ಕಂಡುಬಂದಿದೆ.