ನವದೆಹಲಿ : ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಅವ್ರು ಜಾರಿ ನಿರ್ದೇಶನಾಲಯದ (ಇ.ಡಿ) ಮುಂದೆ ವಿಚಾರಣೆಗೆ ಹಾಜರಾಗಲಿರುವ ಹಿನ್ನೆಲೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಜುಲೈ 21ರ ಗುರುವಾರ ದೇಶಾದ್ಯಂತ ಪ್ರತಿಭಟನೆಗಳನ್ನ ನಡೆಸಲಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್, “ಮೋದಿ-ಶಾ ಜೋಡಿ ನಮ್ಮ ಉನ್ನತ ನಾಯಕತ್ವದ ವಿರುದ್ಧ ರಾಜಕೀಯ ಸೇಡು ತೀರಿಸಿಕೊಳ್ಳುತ್ತಿರುವ ವಿಧಾನದ ವಿರುದ್ಧ ಕಾಂಗ್ರೆಸ್ ಪಕ್ಷವು ತನ್ನ ನಾಯಕಿ ಶ್ರೀಮತಿ ಸೋನಿಯಾ ಗಾಂಧಿ ಅವರೊಂದಿಗೆ ಸಾಮೂಹಿಕ ಒಗ್ಗಟ್ಟನ್ನ ವ್ಯಕ್ತಪಡಿಸಿ, ನಾಳೆ ದೇಶಾದ್ಯಂತ ಪ್ರತಿಭಟನೆಗಳನ್ನ ನಡೆಸಲಿದೆ” ಎಂದು ಹೇಳಿದ್ದಾರೆ.
Tomorrow as the political vendetta unleashed by the Modi-Shah duo against our top leadership continues, the entire Congress party across the country will demonstrate its collective solidarity with Smt. Sonia Gandhi in a most telling manner.
— Jairam Ramesh (@Jairam_Ramesh) July 20, 2022
ಅಂದ್ಹಾಗೆ, ಜೂನ್ 8ರಂದು ಹಾಜರಾಗುವಂತೆ ಕಾಂಗ್ರೆಸ್ ಮುಖ್ಯಸ್ಥರಿಗೆ ಇಡಿ ಮೊದಲು ನೋಟಿಸ್ ನೀಡಿತ್ತು. ಆದ್ರೆ, ಕೋವಿಡ್ -19ಗೆ ಧನಾತ್ಮಕ ಪರೀಕ್ಷೆ ನಡೆಸಿದ ನಂತ್ರ, ರಾಯ್ಬರೇಲಿ ಸಂಸದೆಗೆ ಜೂನ್ 23ಕ್ಕೆ ಎರಡನೇ ಸಮನ್ಸ್ ಜಾರಿ ಮಾಡಲಾಯಿತು. ಯಾಕಂದ್ರೆ, ಅವರು “ಕೋವಿಡ್ -19 ಮತ್ತು ಶ್ವಾಸಕೋಶದ ಸೋಂಕಿನ ಕಾರಣದಿಂದಾಗಿ ಆಸ್ಪತ್ರೆಗೆ ದಾಖಲಾದ ನಂತ್ರ ಮನೆಯಲ್ಲಿ ವಿಶ್ರಾಂತಿ ಪಡೆಯಲು ಸಲಹೆ ನೀಡಲಾಗಿದೆ. ಹಾಗಾಗಿ ಇಚಾರಣೆ ಮುಂದೂಡುವಂತೆ” ಸೋನಿಯಾ ಗಾಂಧಿ ಇಡಿ ಬಳಿ ಮನವಿ ಮಾಡಿದ್ದರು. ಅದ್ರಂತೆ, ನಂತ್ರ ಜುಲೈ 21ರಂದು ಹಾಜರಾಗುವಂತೆ ಅವ್ರಿಗೆ ಸೂಚಿಸಲಾಗಿದೆ.