ಬೆಂಗಳೂರು: ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಶದ್ ಬೆಂಬಲಿಗರಿಂದ ಮನೆಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ, ನಗದು, ಚಿನ್ನ ಲೂಟಿ ಆರೋಪ ಮಾಡಿರುವ ಆರೋಪ ಮಾಡಿರುವ ಘಟನೆ ನಡೆದಿದೆ.
ಬೆಂಗಳೂರಿನ ಪುಲಿಕೇಶಿ ನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ದೆಹಲಿ ಮೂಲದ ಸೋನಾಂ ಮಿಶ್ರ ಎನ್ನುವವರು ಹರ್ಮಲ್ ರಿಗಾಲಿಯ ಅಪಾರ್ಟ್ಮೆಂಟ್ನಲ್ಲಿ ವಾಸ ಮಾಡುತ್ತಿದ್ದಾರೆ. ಇದೇ ವೇಳೆ ಈ ಮನೆ ನಮ್ಮದ್ದು ಅಂತ ಹೇಳಿ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಶದ್ ಅವರ ಬೆಂಬಲಿಗರು ಆಗಮಿಸಿ ಧಮ್ಕಿ ಹಾಕಿ, ಮನೆಯಲ್ಲಿದ್ದ ನಗ, ನಗದು ದೋಚಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಘಟನೆ ಬಗ್ಗೆ ಪುಲಿಕೇಶಿ ನಗರ ಪೋಲಿಸ್ ಠಾಣೆಗೆ ದೂರು ನೀಡಿದರು ಕೂಡ ಈ ಬಗ್ಗೆ ಸರಿಯಾಗಿ ಕ್ರಮ ಕೈಗೊಂಡಿಲ್ಲ ಅಂತ ಕಂಡು ಬಂದಿದೆ. ಹೀಗಾಗಿ ದೂರದಾರ ಮಹಿಳೆ ಬೆಂಗಳೂರು ಪೋಲಿಸ್ ಕಮಿಶನರ್ ಗೆ ದೂರು ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.