ಪಣಜಿ : ಗೋವಾದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC)ಯ ಎಂಟು ಶಾಸಕರು ಸೆಪ್ಟೆಂಬರ್ 14ರ ಬುಧವಾರ ಭಾರತೀಯ ಜನತಾ ಪಕ್ಷ (BJP)ಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ಗೋವಾ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ಪ್ರಮೋದ್ ಸಾವಂತ್ ತಿಳಿಸಿದ್ದಾರೆ. 8 ಶಾಸಕರು ‘ಬೇಷರತ್ತಾಗಿ’ ಸೇರಿಕೊಂಡಿದ್ದಾರೆ ಎಂದು ಸಾವಂತ್ ಹೇಳಿದರು.
ಈ ಹಿಂದೆ ಗೋವಾ ಬಿಜೆಪಿ ಮುಖ್ಯಸ್ಥ ಸದಾನಂದ್ ಶೇಟ್ ತಾನವಾಡೆ ಅವ್ರು ಸಂಭಾವ್ಯ ಬೆಳವಣಿಗೆಯ ಬಗ್ಗೆ ಸುದ್ದಿ ಸಂಸ್ಥೆ ಪಿಟಿಐಗೆ ಮಾಹಿತಿ ನೀಡಿದ್ದರು. 8 ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಿದ ನಂತರ ಪ್ರಮೋದ್ ಸಾವಂತ್ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಸದಾನಂದ್ ಶೇಟ್ ತಾನವಡೆ ಅವ್ರು ಪತ್ರಿಕಾಗೋಷ್ಠಿ ನಡೆಸಿದರು ಮತ್ತು 40 ಸದಸ್ಯರ ವಿಧಾನಸಭೆಯಲ್ಲಿ ಎಂಟು ಹೊಸ ಸೇರ್ಪಡೆಗಳೊಂದಿಗೆ ಬಿಜೆಪಿಯ ಬಲವು 28ಕ್ಕೆ ಏರಿದೆ ಎಂದು ಹೇಳಿದರು.
ಗೋವಾ ಅಸೆಂಬ್ಲಿ
ಈ ಹಿಂದೆ 40 ಸದಸ್ಯ ಬಲದ ಗೋವಾ ವಿಧಾನಸಭೆಯಲ್ಲಿ ಕಾಂಗ್ರೆಸ್ 11 ಮತ್ತು ಬಿಜೆಪಿ 20 ಶಾಸಕರನ್ನು ಹೊಂದಿತ್ತು. ಮಾಜಿ ಮುಖ್ಯಮಂತ್ರಿ ದಿಗಂಬರ ಕಾಮತ್ ಸೇರಿದಂತೆ ಕಾಂಗ್ರೆಸ್ನ 11 ಶಾಸಕರಲ್ಲಿ ಎಂಟು ಮಂದಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.