ಕೆಎನ್ಎನ್ಡಿಜಿಟಲ್ ಡೆಸ್ಕ್ : ಕಾಮನ್ವೆಲ್ ಕ್ರಿಡಾಕೂಟದಲ್ಲಿ ಒಲಿಂಪಿಕ್ ಬೆಳ್ಳಿ ಪದಕ ವಿಜೇತ ರವಿ ಕುಮಾರ್ ದಹಿಯಾ ಕುಸ್ತಿಯಲ್ಲಿ 57 ಕೆಜಿ ತೂಕದ ವಿಭಾಗದಲ್ಲಿ ಚಿನ್ನದ ಪದಕವನ್ನ 10-0 ಅಂತರದಿಂದ ಗೆದ್ದರು.
Olympic silver medallist Ravi Kumar Dahiya bags a gold medal in 57 Kg weight category in wrestling with a 10-0 victory in #CommonwealthGames2022 pic.twitter.com/RXSLzWGN4R
— ANI (@ANI) August 6, 2022
ಹೌದು ದಹಿಯಾ, ಪುರುಷರ 57 ಕೆಜಿ ವಿಭಾಗದಲ್ಲಿ ಭಾರತಕ್ಕೆ ಚಿನ್ನದ ಪದಕ ತಂದಿದ್ದಾರೆ. ತಾಂತ್ರಿಕ ಶ್ರೇಷ್ಠತೆಯ ಆಧಾರದ ಮೇಲೆ ವಿಲ್ಸನ್ ಅವರನ್ನ 10-0 ಅಂತರದಿಂದ ಸೋಲಿಸಲಾಯಿತು. ಪಂದ್ಯವನ್ನ ಗೆಲ್ಲಲು ರವಿ ದಹಿಯಾಗೆ ಮೂರು ನಿಮಿಷಗಳಿಗಿಂತ ಕಡಿಮೆ ಸಮಯ ಹಿಡಿಯಿತು. ಇನ್ನೀದು 2022ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ 10ನೇ ಚಿನ್ನದ ಪದಕವಾಗಿದೆ. ಇನ್ನೀದು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ದಹಿಯಾ ಅವ್ರು ಚೊಚ್ಚಲ ಚಿನ್ನದ ಪದಕವಾಗಿದೆ.
ಟೋಕಿಯೋ ಒಲಿಂಪಿಕ್ಸ್ʼನ ಫ್ರೀಸ್ಟೈಲ್ 57 ಕೆಜಿ ತೂಕದ ವಿಭಾಗದಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ 24 ವರ್ಷದ ರವಿ ಇತಿಹಾಸ ನಿರ್ಮಿಸಿದ್ದರು. ಹರಿಯಾಣದ ಸೋನೆಪತ್ ಮೂಲದ ರವಿ ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಆಯ್ಕೆ ಟ್ರಯಲ್ಸ್ನಲ್ಲಿ ಒಂದು ಪಂದ್ಯವನ್ನ ಗೆಲ್ಲುವ ಮೂಲಕ ಬರ್ಮಿಂಗ್ಹ್ಯಾಮ್ʼನಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದಿದ್ದರು. ಈ ವರ್ಷ, ಅವರು ಏಷ್ಯನ್ ಕುಸ್ತಿ ಚಾಂಪಿಯನ್ಶಿಪ್ʼಗಳನ್ನ ಗೆದ್ದರು. ರವಿ ಅವರು 2019ರ ವಿಶ್ವ ಕುಸ್ತಿ ಚಾಂಪಿಯನ್ಶಿಪ್ʼನಲ್ಲಿ ಕಂಚು ಗೆದ್ದಿದ್ದಾರೆ. ಇದಷ್ಟೇ ಅಲ್ಲದೇ ದಹಿಯಾ, 3 ಬಾರಿ ಏಷ್ಯನ್ ಚಾಂಪಿಯನ್ ಆಗಿದ್ದಾರೆ.