ನವದೆಹಲಿ : ಅಮಿತ್ ಪಂಘಾಲ್ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದಿದ್ದಾರೆ. ಈ ಮೂಲಕ ಅವ್ರು ಭಾರತಕ್ಕೆ 15ನೇ ಚಿನ್ನದ ಪದಕವನ್ನ ನೀಡಿದರು. ಇನ್ನು ಅವರಿಗಿಂತ ಮೊದಲು ಬಾಕ್ಸರ್ ನೀತು ಕೂಡ ಚಿನ್ನದ ಪದಕ ಗೆದ್ದಿದ್ದಾರೆ. ಅಂದ್ಹಾಗೆ, ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಪಂಘಾಲ್ ಮೊದಲ ಬಾರಿಗೆ ಸ್ವರ್ಣ ಪದಕ ಗೆದ್ದಿದ್ದಾರೆ. ಇದಕ್ಕೂ ಮುನ್ನ ಅವರು 2018ರ ಗೋಲ್ಡ್ ಕೋಸ್ಟ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.
Indian Boxer Amit Panghal wins Gold in the 48-51kg weight category defeating England's Kiaran Macdonald by 5-0 in #CommonwealthGames2022 pic.twitter.com/mN4AmluSkb
— ANI (@ANI) August 7, 2022
ಕಾಮನ್ ವೆಲ್ತ್ ಗೇಮ್ಸ್ 2022 ರಲ್ಲಿ ಭಾರತದ ಬಾಕ್ಸರ್ ಅಮಿತ್ ಪಾಂಗಲ್ 48-51 ಕೆಜಿ ತೂಕದ ವಿಭಾಗದಲ್ಲಿ ಇಂಗ್ಲೆಂಡ್ನ ಕಿಯಾರನ್ ಮೆಕ್ಡೊನಾಲ್ಡ್ ಅವರನ್ನು 5-0 ಅಂತರದಿಂದ ಸೋಲಿಸಿದರು.
ಕಂಚಿನ ಪದಕ ಗೆದ್ದ ಭಾರತೀಯ ಮಹಿಳಾ ಹಾಕಿ ತಂಡ
ಭಾರತೀಯ ಮಹಿಳಾ ಹಾಕಿ ತಂಡ ಭಾನುವಾರ ನಡೆದ ಶೂಟೌಟ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ನ್ಯೂಜಿಲೆಂಡ್ ತಂಡವನ್ನ 2-1 ಗೋಲುಗಳಿಂದ ಸೋಲಿಸುವ ಮೂಲಕ ಕಂಚಿನ ಪದಕ ಗೆದ್ದುಕೊಂಡಿತು. ಪಂದ್ಯದ ಅಂತಿಮ ಕ್ಷಣಗಳಲ್ಲಿ ಭಾರತ ತಂಡವು 1-0 ಮುನ್ನಡೆ ಸಾಧಿಸಿತ್ತು, ಆದರೆ ಕೊನೆಯ 30 ಸೆಕೆಂಡುಗಳಿಗಿಂತ ಕಡಿಮೆ ಅವಧಿಯಲ್ಲಿ, ಅವರು ಎದುರಾಳಿ ತಂಡಕ್ಕೆ ಪೆನಾಲ್ಟಿ ಕಾರ್ನರ್ ನೀಡಿದರು. ಇದು ಪೆನಾಲ್ಟಿ ಸ್ಟ್ರೋಕ್ ಆಗಿ ಮಾರ್ಪಟ್ಟಿತು ಮತ್ತು ಒಲಿವಿಯಾ ಮೇರಿ ನ್ಯೂಜಿಲೆಂಡ್ ಪರ ಸಮಬಲ ಸಾಧಿಸಿದರು, ನಂತರ ಪಂದ್ಯವನ್ನು ಶೂಟೌಟ್ ಗೆ ಎಳೆಯಲಾಯಿತು.
ಶೂಟೌಟ್ ನಲ್ಲಿ ತಾಳ್ಮೆಯನ್ನ ಕಾಯ್ದುಕೊಂಡ ಭಾರತ ಗೆಲುವು ದಾಖಲಿಸಿತು. ವಿವಾದಾತ್ಮಕ ಸೆಮಿಫೈನಲ್ʼನಲ್ಲಿ ಆಸ್ಟ್ರೇಲಿಯಾ ವಿರುದ್ಧ ಹೃದಯ ವಿದ್ರಾವಕ ಸೋಲಿನ ನಂತ್ರ, ಈ ಪಂದ್ಯದಲ್ಲಿ ಆಡುವ ಭಾರತೀಯ ತಂಡವು ಪಂದ್ಯದುದ್ದಕ್ಕೂ ಉತ್ತಮ ಪ್ರದರ್ಶನ ನೀಡಿ ಪದಕವನ್ನ ಗೆದ್ದುಕೊಂಡಿತು. ಸಲೀಮಾ ಟೆಟೆ ಅವರ ಗೋಲಿನಿಂದಾಗಿ, ಭಾರತವು ಮಧ್ಯಂತರದಲ್ಲಿ 1-0 ಮುನ್ನಡೆ ಸಾಧಿಸಿತು. ವಿರಾಮದ ನಂತರ, ನೇಹಾ ಗೋಯೆಲ್ ತಂಡದ ಮುನ್ನಡೆಯನ್ನ ದ್ವಿಗುಣಗೊಳಿಸಿದ್ದರು, ಆದರೆ ನ್ಯೂಜಿಲೆಂಡ್ ತಮ್ಮ ರಕ್ಷಣಾ ರೇಖೆಯ ಉತ್ತಮ ಪ್ರದರ್ಶನದಿಂದಾಗಿ ಭಾರತಕ್ಕೆ ತಮ್ಮ ಸ್ಥಾನವನ್ನು ಬಲಪಡಿಸಲು ಅವಕಾಶ ನೀಡಲಿಲ್ಲ.