ಬೆಂಗಳೂರು : ಐವರು ನ್ಯಾಯಾಂಗ ಅಧಿಕಾರಿಗಳನ್ನು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಪದೋನ್ನತಿಗೊಳಿಸುವಂತೆ ಸುಪ್ರೀಂಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದೆ.
ಜುಲೈ 19, 2022ರಂದು ನಡೆದ ಕೊಲಿಜಿಯಂ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಶಿಫಾರಸು ಮಾಡಲಾದ ನ್ಯಾಯಾಂಗ ಅಧಿಕಾರಿಗಳೆಂದರೆ,
1. ಅನಿಲ್ ಭೀಮಸೇನ ಕತ್ತಿ
2. ಗುರುಸಿದ್ದಯ್ಯ ಬಸವರಾಜ
3. ಚಂದ್ರಶೇಖರ ಮೃತ್ಯುಂಜಯ ಜೋಶಿ
4. ಉಮೇಶ್ ಮಂಜುನಾಥ ಭಟ್ ಅಡಿಗ
5. ತಾಲ್ಕಡ್ ಗಿರಿಗೌಡ ಶಿವಶಂಕರೇಗೌಡ.
ಅಂದ್ಹಾಗೆ, ಜುಲೈ 1, 2022ರಂತೆ ಕರ್ನಾಟಕ ಹೈಕೋರ್ಟ್ 45 ಸದಸ್ಯರ ಬಲದಲ್ಲಿ ಕಾರ್ಯನಿರ್ವಹಿಸುತ್ತಿದ್ದು, 17 ಹುದ್ದೆಗಳು ಖಾಲಿ ಇವೆ.