ಶಿವಮೊಗ್ಗ : ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಪೊಲೀಸರಿಂದ ಫೈರಿಂಗ್ ನಡೆದಿದ್ದು, ಅಸ್ಲಾಂ ಅಲಿಯಾಸ್ ಚೋರ್ ಅಸ್ಲಾಂ ಕಾಲಿಗೆ ಪೊಲೀಸರು ಗುಂಡು ಹಾರಿಸಿರುವ ಘಟನೆ ನಡೆದಿದೆ.
E-Shram Card : ಕಾರ್ಮಿಕರಿಗೆ ನೋಂದಣಿ ಕುರಿಂತೆ ಇಲ್ಲಿದೆ ಮಹತ್ವದ ಮಾಹಿತಿ
ಶಿವಮೊಗ್ಗದ ಹೊರವಲಯದ ಗುರುಪುರ ಬಳಿ ಘಟನೆ ನಡೆದಿದೆ. ಪ್ರಕರಣವೊಂದರಲ್ಲಿ ಬೇಕಾಗಿದ್ದ. ಆರೋಪಿ ಅಸ್ಲಾಂನನ್ನು ಬಂಧನಕ್ಕೆ ತೆರಳಿದ್ದ ವೇಳೆ ಅಸ್ಲಾಂ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದ. ಈ ವೇಳೆ ಪಿಎಸ್ ಐ ವಸಂತ್ ಅಸ್ಲಾಂ ಕಾಲಿಗೆ ಫೈರಿಂಗ್ ಮಾಡಿದ್ದಾರೆ.
ಸದ್ಯ ಆರೋಪಿ ಅಸ್ಲಾಂಗೆ ಶಿವಮೊಗ್ಗದ ಮೆಗ್ಗಾನ್ ಅಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವಿವಿಧ ಪೊಲೀಸ್ ಠಾಣೆಗಳಲ್ಲಿ ಅಸ್ಲಾಂ ವಿರುದ್ಧ 9 ಪ್ರಕರಣಗಳು ದಾಖಲಾಗಿದ್ದವು.